ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವದ ತಿಂಗಳು ಇಂದು ಮೊದಲನೇ ದಿನ ಗಡಿ ತಾಲೂಕಾದ ಜೋಯಿಡಾದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮಗಳಿಂದ ಆಚರಿಸಲಾಯಿತು.

ತಾಲೂಕಾ ಆಡಳಿತದ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಜೋಯಿಡಾ ತಹಶೀಲ್ದಾರ್ ಮಂಜುನಾಥ ಮುನ್ನೋಳಿ ಅವರು ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅಧಿಕೃತವಾಗಿ ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಡಿ ಭಾಗದಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವದ್ದಾಗಿದೆ ಸರಕಾರದ ಆಡಳಿತ ಬಾಷೆ ಕೂಡ ಕನ್ನಡ ವಾದ್ದರಿಂದ ಎಲ್ಲರೂ ಕನ್ನಡ ದಲ್ಲಿಯೇ ವ್ಯವಹರಿಸಿ ಕನ್ನಡ ಭಾಷೆ ಸಂಸ್ಕೃತಿಯನ್ನು ಬೆಳೆಸುವ ಅಗತ್ಯ ವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜೋಯಿಡಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (ಇಓ) ಭಾರತಿ ಎಂ., ಕೆಪಿಸಿಸಿ ಸದಸ್ಯ ಸದಾನಂದ ದಬ್ಗಾರ, ಜೆಡಿಎಸ್ ಅಧ್ಯಕ್ಷ ಅಜಿತ ಥೋರವಥ್, ಉಪ ತಹಶೀಲ್ದಾರ್‌ಗಳಾದ ಸಂಜೀವ ಭಜಂತ್ರಿ ಹಾಗೂ ಸುರೇಶ ವಕ್ಕುಂದ ಅವರು ಉಪಸ್ಥಿತರಿದ್ದರು.

ಇವರೊಂದಿಗೆ ಜೋಯಿಡಾ ಪಿಎಸ್‌ಐ ಜಗದೀಶ್ ನಾಯ್ಕ, ಜಿಲ್ಲಾ ಪಂಚಾಯತ್ ಎಇಇ ಶಿವಪ್ರಕಾಶ, ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ತಾಲೂಕು ಅಧ್ಯಕ್ಷ ಪಾಂಡುರಂಗ ಪಟಗಾರ, ಕುಣಬಿ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಗಾವಡಾ, ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯ್ಕ ಸೇರಿದಂತೆ ಹಲವು ಪ್ರಮುಖರು ಹಾಗೂ ಸಾರ್ವಜನಿಕರು ಭಾಗವಹಿಸಿ ಗಡಿ ನಾಡಿನಲ್ಲಿ ಕನ್ನಡದ ಜಯಘೋಷ ಮೊಳಗಿಸಿದರು.ನಂತರ ಎಲ್ಲ ಇಲಾಖೆಗಳ ಸ್ಥಬ್ದ ಚಿತ್ರ ಗಳ ಮೆರವಣಿಗೆ ನಡೆಯಿತು, ಪ್ರಥಮ ಮೂರು ಸ್ಥಾನ ಪಡೆದ ಸ್ಥಬ್ದ ಚಿತ್ರಗಳಿಗೆ ಜೆ ಡಿ ಎಸ್ ಅಧ್ಯಕ್ಷ ಅಜಿತ್ ಥೋರತ್ ಅವರ ಪ್ರಾಯೋಜಕತ್ವದಲ್ಲಿ ಬಹುಮಾನ ವಿತರಿಸಲಾಯಿತು.ಹಲವಾರು ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮ ದಲ್ಲಿ ಕಂಡು ಬರಲಿಲ್ಲ. ತಾಲೂಕಿನ ಎಲ್ಲ ಕಡೆ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಗಿದೆ.