ಸುದ್ದಿ ಕನ್ನಡ ವಾರ್ತೆ

​ಕರ್ನಾಟಕ ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಎನ್‌ಡಿಎ ಮೈತ್ರಿಕೂಟದ ಎಲ್ಲಾ ವಿಜೇತ ಅಭ್ಯರ್ಥಿಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನೆ ಸಲ್ಲಿಸಿದ್ದಾರೆ.

​  ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು_     ಈ ಐತಿಹಾಸಿಕ ವಿಜಯವು ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ಹಾಗೂ ದಕ್ಷ ನಾಯಕತ್ವಕ್ಕೆ ಮತ್ತು ಎನ್‌ಡಿಎ ಮೈತ್ರಿಕೂಟದ ಮೇಲೆ ಶಿಕ್ಷಕರು ಹಾಗೂ ಪದವೀಧರರು ಇಟ್ಟಿರುವ ಅಚಲ ವಿಶ್ವಾಸಕ್ಕೆ ಸಂದ ಜಯವಾಗಿದೆ.

​🔸 ಶ್ರೀ ಕೆ.ಎಂ. ಸುರೇಶ್ – ಆಗ್ನೇಯ ಪದವೀಧರ ಕ್ಷೇತ್ರದಿಂದ ಜಯಭೇರಿ ಬಾರಿಸಿದ ಅಭ್ಯರ್ಥಿ.
🔸 ಶ್ರೀ ಎಸ್.ವಿ. ಸಂಕನೂರ – ಪಶ್ಚಿಮ ಪದವೀಧರ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಗೆದ್ದು ಹ್ಯಾಟ್ರಿಕ್ ಸಾಧಿಸಿದ ನಾಯಕರು.

🔸 ಶ್ರೀ ಶಶಿಲ್ ಜಿ. ನಮೋಶಿ – ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಭರ್ಜರಿ ಗೆಲುವು.

🔸 ಶ್ರೀ ಎ.ಪಿ. ರಂಗನಾಥ್ – ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಜಯ ಪತಾಕೆ ಹಾರಿಸಿದವರು.

​ಈ ಮಹತ್ತರ ಗೆಲುವಿಗಾಗಿ ಕಣಕ್ಕಿಳಿದು, ಹೆಗಲಿಗೆ ಹೆಗಲು ಕೊಟ್ಟು ಬೂತ್ ಮಟ್ಟದಿಂದ ಹಗಲಿರುಳು ಶ್ರಮಿಸಿದ ಬಿಜೆಪಿ ಹಾಗೂ ಜೆಡಿಎಸ್‌ನ ಪ್ರತಿಯೊಬ್ಬ ಕಾರ್ಯಕರ್ತರಿಗೂ, ಉಭಯ ಪಕ್ಷಗಳ ಪ್ರಮುಖರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಕಾಗೇರಿ ಹೇಳಿದ್ದಾರೆ.

ನಿಮ್ಮ ನಿಸ್ವಾರ್ಥ ಪರಿಶ್ರಮ, ಒಗ್ಗಟ್ಟು ಮತ್ತು ಸಮನ್ವಯತೆಯೇ ಈ ಐತಿಹಾಸಿಕ ಗೆಲುವಿಗೆ ಕಾರಣ.
​ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿ ಆಶೀರ್ವದಿಸಿದ ಗೌರವಾನ್ವಿತ ಶಿಕ್ಷಕ ಮತ್ತು ಪದವೀಧರ ಮತದಾರ ಪ್ರಭುಗಳಿಗೆ ಅನಂತ ಕೃತಜ್ಞತೆಗಳು.
ರಾಜ್ಯದ ಸಮಗ್ರ ವಿಕಾಸ ಹಾಗೂ ಶಿಕ್ಷಕರ-ಪದವೀಧರರ ಹಕ್ಕುಗಳ ರಕ್ಷಣೆಗಾಗಿ ನಮ್ಮ ಮೈತ್ರಿಕೂಟ ಸದಾ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನುಡಿದಿದ್ದಾರೆ.