ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೋಯಿಡಾ ಹಾಗೂ ತಾಲೂಕ ಆಸ್ಪತ್ರೆ ಜೋಯಿಡಾ ಪ್ರಥಮ ದರ್ಜೆ ಕಾಲೇಜು ಜೋಯಿಡಾ ಹಾಗೂ ಜಿಲ್ಲಾ ರಕ್ತ ನಿಧಿ ಕೇಂದ್ರ ಕಾರವಾರ್ ಇವರ ಸಂಯುಕ್ತ ಆಶ್ರಯದಲ್ಲಿ *ಸ್ವಯಂ* *ಪ್ರೇರಿತ* *ರಕ್ತದಾನ* *ಶಿಬಿರ* ಕಾರ್ಯಕ್ರಮವನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಜೋಯಿಡಾದಲ್ಲಿ ಹಮ್ಮಿಕೊಳ್ಳಲಾಗಿತ್ತು .
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಗದೀಶ್ ನಾಯಕ್ ಪಿಎಸ್ಐ ಪೊಲೀಸ್ ಠಾಣೆ ಜೋಯಿಡಾ ಇವರು ದೀಪ ಬೆಳಗಿಸುವುದರ ಜೊತೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕಾರ್ಯಕ್ರಮ ಉದ್ದೇಶಿಸಿ ರಕ್ತದಾನ ಮಾಡುವುದರಿಂದ ಆಗುವ ಲಾಭಗಳ ಕುರಿತು ಮತ್ತು ಉತ್ತಮ ಆರೋಗ್ಯದ ಕುರಿತು ಮಾಹಿತಿ ನೀಡಿದರು.
ಡಾಕ್ಟರ್ ಪ್ರಿಯಾ ಮೆಡಿಕಲ್ ಆಫೀಸರ್ ರಕ್ತ ನಿಧಿ ಕೇಂದ್ರ ಕಾರವಾರ್ ಇವರು ರಕ್ತದಾನ ಮಾಡುವುದರಿಂದ ಹೃದಯಾಘಾತ ತಡೆಗಟ್ಟುವ ಕುರಿತು ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನಯಾ ಕಾಮತ್ ಪ್ರಾಂಶುಪಾಲರು ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ರಕ್ತದಾನದ ಮಹತ್ವ ಕುರಿತು ಮಾತನಾಡಿದರು.
ವೇದಿಕೆ ಮೇಲೆ ಮಹಮ್ಮದ್ ವಾಹಿದ್ ಉಪನ್ಯಾಸಕರು ಪ್ರಥಮ ದರ್ಜೆ ಕಾಲೇಜು ಜೋಯಿಡಾ, ದೇವೇಂದ್ರ ಸಾಲಕ್ಕಿ ತಾಲೂಕ ಆಸ್ಪತ್ರೆ ಜೋಯಿಡಾ ಕಾರ್ಯಕ್ರಮವನ್ನು ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಜೋಯಿಡಾ ಆಯೋಜಿಸಿದರು ಬಾಲಚಂದ್ರ ನಾಯಕ್ ಉಪನ್ಯಾಸಕರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಜೋಯಿಡಾ ವಂದಿಸಿದರು ಒಟ್ಟು 22 ಜನರು ರಕ್ತದಾನ ಮಾಡಿದರು. ಪ್ರಶಾಂತ್ ಅಂಬಿಗರ ತಾಲೂಕ ಆಸ್ಪತ್ರೆ ಜೋಯಿಡಾ ಸಹಕರಿಸಿದರು.
