ಸುದ್ದಿ ಕನ್ನಡ ವಾರ್ತೆ
ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿರುವ ಅರ್ನಬ್ ಚಂಡಮಾರುತದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಚಂಡಮಾರುತದ ಪರಿಣಾಮ ಭಾರಿ ಗಾಳಿ ಮಳೆ ಆರಂಭಗೊಂಡಿದ್ದು ಬುಧವಾರ 12 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಬುಧವಾರ ರದ್ದುಗೊಳಿಸಲಾಗಿರುವ ವಿಮಾನಗಳ ಪೈಕಿ ಚೆನ್ನೈ ದಿಂದ ತೆರಳುವ ಆರು, ಹಾಗೂ ಚೆನ್ನೈಗೆ ಬರುವ ಆರು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಆಂಧ್ರಪ್ರದೇಶಕ್ಕೆ ಅಪ್ಪಳಿಸಿರುವ ಚಂಡಮಾರುತದ ವೇಗ ಗಂಟೆಗೆ 150km ರಷ್ಟಿದೆ ಎನ್ನಲಾಗಿದೆ. ಆಂಧ್ರಪ್ರದೇಶದಲ್ಲಿ ಚಂಡಮಾರುತವು ಈಗಾಗಲೇ ತನ್ನ ಆರ್ಭಟ ಮುಂದುವರಿಸಿದ್ದು, ವಿದ್ಯುತ್ ಕಂಬಗಳು ಧರೆಗುರುಳಿದೆ, ಭರತ್ ಬೃಹತ್ ಮರಗಳು ಕಿತ್ತು ಬಿದ್ದಿವೆ, ಜನಜೀವನ ಸ್ತವ್ಯಸ್ತಗೊಂಡಿದೆ.
ಚಂಡಮಾರುತವು ಆಂಧ್ರಪ್ರದೇಶದ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವಿನ ದಕ್ಷಿಣ ಭಾಗದ ಸಮೀಪ ಕರಾವಳಿಗೆ ಅಪ್ಪಳಿಸಿದೆ.
