ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ,ಪ್ರೌಢ ಶಾಲೆಗಳಿಗೆ ನಾಡಹಬ್ಬ ದಸರಾ ಹಬ್ಬದ ನಿಮಿತ್ತ ರಜೆಯ ಕಾರಣ ಶಾಲೆಗಳ ಆವರಣ ಶಾಂತವಾಗಿದ್ದವು.
ಅಕ್ಟೋಬರ್ 22 ರಿಂದ ಮತ್ತೇ ಶಾಲೆಗಳು ಪ್ರಾರಂಭ ವಾಗಲಿದ್ದು,ಎಲ್ಲೆಡೆ ಚಿಣ್ಣರ ಕಲರವ ಕೇಳಿ ಬರಲಿದೆ. ಮಕ್ಕಳು ರಜಾ ಅವಧಿಯಲ್ಲಿ ನೀಡಿದ ಅಭ್ಯಾಸದ ಮನೆ ಕೆಲಸವನ್ನು ಸಿದ್ಧಪಡಿಸಿ, ಸಮವಸ್ತ್ರ,ಪಠ್ಯಪುಸ್ತಕ,ದಿನನಿತ್ಯದ ವಸ್ತುಗಳೊಂದಿಗೆ ಶಾಲೆಯತ್ತ ಖುಷಿಯಿಂದ ಹೊರಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಮಧ್ಯಾಹ್ನ,ಸಂಜೆಯ ವೇಳೆ ಗುಡುಗು,ಮಿಂಚಿನೊಂದಿಗೆ ಆಗಾಗ ಮಳೆಯಾಗುತ್ತಿದ್ದು,ಶಾಲೆಯಲ್ಲಿ ಹಾಗೂ ದಾರಿಯಲ್ಲಿ ಎಚ್ಚರಿಕೆಯಿಂದ ಇರುವಂತೆ ಮಕ್ಕಳಿಗೆ ಶಿಕ್ಷಕರು, ಪಾಲಕರು, ಪೋಷಕರು ಸೂಚನೆ ನೀಡಿರುತ್ತಾರೆ.
