Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಶಿರಸಿಯಿಂದ ರಾತ್ರಿ ಬೈಕ್ ನಲ್ಲಿ ಯಲ್ಲಾಪುರಕ್ಕೆ ಬರುತ್ತಿದ್ದ ವೇಳೆ ಉಮ್ಮಚಗಿ ಚವತ್ತಿ ಬಳಿ ಬೈಕ್ ಸ್ಕಿಡ್ ಆಗಿ ಅಪಘಾತಕ್ಕೀಡಾಗಿ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ.

Banner Ad

ಈ ಯುವಕನನ್ನು ಯಲ್ಲಾಪುರ ತಾಲೂಕಿನ ಕೆಳಗಿನ ಪಾಲ್ ದತ್ತಾತ್ರೇಯ ಭಟ್ ರವರ ಪುತ್ರ ವಿವೇಕ್ ಭಟ್ ಎಂದು ಗುರುತಿಸಲಾಗಿದೆ.

ಈ ಘಟನೆ ಶನಿವಾರ ರಾತ್ರಿ ಸಂಭವಿಸಿದ್ದು ವಿವೇಕ್ ಭಟ್ ಈತ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈತ ಬೈಕ್ ಸ್ಕಿಡ್ ಆಗಿ ಪಕ್ಕದ ಬೆಟ್ಟಕ್ಕೆ ಹೋಗಿ ಬಿದ್ದಿದ್ದರಿಂದ ಈ ಅಪಘಾತದ ಕುರಿತು ರಸ್ತೆಯಲ್ಲಿ ಓಡಾಟ ನಡೆಸುವ ಯಾರಿಗೂ ಅರಿವಿಗೆ ಬಂದಿಲ್ಲ ಎನ್ನಲಾಗಿದೆ.

ಭಾನುವಾರ ಬೆಳಿಗ್ಗೆ ಸ್ಥಳೀಯರು ಪೊಲೀಸರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದಾಗಲೇ ಈ ಘಟನೆ ನಡೆದಿರುವ ಬಗ್ಗೆ ತಿಳಿದುಬಂದಿದೆ. ಯಲ್ಲಾಪುರ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Banner Ad