Banner Ad

ಸುದ್ದಿ ಕನ್ನಡ ವಾರ್ತೆ

​ಶಿರಸಿ:ತಾಲೂಕಿನ ಮತ್ತಿಹಳ್ಳಿಯ ಶ್ರೀ ರಾಮಾಂಜನೇಯ ಯುವಕ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಸರ್ಕಾರ ಹಾಗೂ ಅಧಿಕಾರಿಗಳನ್ನು ದೂಷಿಸುವ ಬದಲು ನಮ್ಮ ಗ್ರಾಮ, ನಮ್ಮ ಹಕ್ಕು ಎಂಬ ಧ್ಯೇಯದೊಂದಿಗೆ ಗ್ರಾಮದ ಸ್ವಚ್ಛತೆ ಹಾಗೂ ಮೂಲಸೌಕರ್ಯ ಸುಧಾರಣೆಗೆ ಮುಂದಾಗಿ ಹೊಂಡ-ಗುಂಡಿಗಳಿಂದ ಹದಗೆಟ್ಟಿದ್ದ ರಸ್ತೆಯನ್ನು ದುರಸ್ತಿಪಡಿಸುವ ಮೂಲಕ ಮಾದರಿಯಾಗಿದ್ದಾರೆ.

Banner Ad

 

​ಮತ್ತಿಹಳ್ಳಿಯಿಂದ ಬಂಕನಾಳ-ಮಾಳಂಜಿ-ಕುಪ್ಪಗಡ್ಡೆ-ದಾಸನಕೊಪ್ಪ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಉಂಟಾಗಿದ್ದ ಹೊಂಡಗುಂಡಿಗಳನ್ನು ಸಂಘದ ಸದಸ್ಯರು ಸ್ವತಃ ದುರಸ್ತಿಪಡಿಸಿದರು. ಇದರೊಂದಿಗೆ ರಸ್ತೆ ಅಂಚಿನಲ್ಲಿ ಬೆಳೆದಿದ್ದ ಗಿಡಗಂಟಿ ಹಾಗೂ ಅನಗತ್ಯ ಸಸ್ಯಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯವನ್ನೂ ಕೈಗೊಂಡರು.
​ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಯಾವುದೇ ಕಾರ್ಯವೂ ಕಷ್ಟವಲ್ಲ, ಎಲ್ಲರ ಭಾವನೆಯೂ ಉತ್ತಮವಾಗಿದ್ದರೆ ಗ್ರಾಮ ಸ್ವಚ್ಛ ಹಾಗೂ ಸುಭಿಕ್ಷವಾಗಿರುತ್ತದೆ’ ಎಂಬ ಆಶಯದೊಂದಿಗೆ ಸಂಘದ ಸದಸ್ಯರು ಈ ಕಾರ್ಯ ಕೈಗೊಂಡಿದ್ದಾರೆ. ಸ್ವಚ್ಛತಾ ಹಾಗೂ ರಸ್ತೆ ದುರಸ್ತಿ ಕಾರ್ಯದಲ್ಲಿ ಸಂಘದ ಸದಸ್ಯರೊಂದಿಗೆ ಊರಿನ ಗ್ರಾಮಸ್ಥರೂ ಉತ್ಸಾಹದಿಂದ ಭಾಗವಹಿಸಿದ್ದರು.

Banner Ad