ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ :ಬೇಡ್ತಿ ಗಂಗಾವಳಿ ಅಘನಾಶಿನಿ ನದಿ ತಿರು ಯೋಜನೆ ವಿರುಧ್ದದ ಹೋರಾಟ ತೀವೃಗೊಳಿಸುವ ( ರಾ.ಹೆದ್ದಾರಿ ತಡೆ ಮಾಡುವ ) ಹಿನ್ನೆಲೆಯಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಯಲ್ಲಾಪುರದಲ್ಲಿ ಎರಡನೇಯ ಪೂರ್ವಭಾವಿ ಸಮಾಲೋಚನಾ ಸಭೆ ಶನಿವಾರ ನಡೆಯಿತು.

ಪ್ರತಿಭಟನೆ,ಪತ್ರಚಳುವಳಿ,ಮನವಿ,ಹೋರಾಟಗಳು ಈ ವರೆಗೆ ನಡೆದು ಸರಕಾರಗಳ ಗಮನ ಸೆಳೆಯಲಾಗಿದೆ.ಆದರೂ ಯೋಜನೆಯನ್ನು ಕೈಬಿಡುವ ಬಗ್ಗೆ ಈ ಸರಕಾರಗಳು ಪ್ರಸ್ತಾಪಿಸದ ಕಾರಣ ರಾಷ್ಟ್ರೀಯ ಹೆದ್ದಾರಿ ತಡೆದು ಬ್ರಹತ್ ಜನಾಂದೋಲನವನ್ನು ಮಾಡಲೇಬೇಕೆಂದು ಸಭೆಯಲ್ಲಿ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.ನವೆಂಬರ ೩ ರಸ್ತಾ ರೋಕೋ ಎಂದು ನಿಖರಪಡಿಸಲಾಯಿತು.

.ಈ ಸಂಬಂಧ ಸಭೆಯಲ್ಲಿ ಸ್ಥಾನಿಕವಾದ ಸಮಿತಿಯನ್ನು ರಚಿಸಲಾಯಿತು.
*ಯಲ್ಲಾಪುರ ರಸ್ತಾ ತಡೆ ಸಂಚಾಲನಾ ಸಮಿತಿ* ಯನ್ನು ರಚಿಸಿ ಟಿ.ಎಂ.ಎಸ್ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿಯವರನ್ನು ಈ ಸಮಿತಿಯ ಅಧ್ಯಕ್ಷರನ್ನಾಗಿ ಹಾಗೂ ಹರಿಪ್ರಕಾಶ ಕೋಣೆಮನೆ ಅವರನ್ನು ಪ್ರಧಾನ ಸಂಚಾಲಕರನ್ನಾಗಿ ಯಲ್ಲಾಪುರ ತಾಲೂಕಿನ ಹಾಗೂ ಹಲವಳ್ಳಿ ಭಾಗವನ್ನೊಳಗೊಂಡು ವಿವಿಧ ಪ್ರದೇಶಗಳನ್ನೊಳಗೊಂಡ ೩೦ ಜನರನ್ನು ಸಂಚಾಲಕರನ್ನಾಗಿ ಸಭೆಯಲ್ಲಿ ಆಯ್ಕೆಗೊಳಿಸಲಾಯಿತು.

ವಿವಿಧ ಜವಾಬ್ದಾರಿ ಮುಂದಿನ ಕಾರ್ಯಸ್ವರೂಪದ ಬಗ್ಗೆ ಚರ್ಚೆ ಸಮಾಲೋಚನೆ ನಡೆಯಿತು.ಗ್ರಾಮ ಪಂಚಾಯತ ಮಟ್ಟದಲ್ಲಿ ಉಪಸಮಿತಿಗಳನ್ನು ರಚಿಸಿ ಸಂಘಟನೆ ಬಲಗೊಳಿಸುವ ವಿಧಾನದ ಬಗ್ಗೆ ಚರ್ಚಿಸಲಾಯಿತು.೧೦-೧೨ ಸಾವಿರ ಜನರನ್ನು ರಸ್ತೆ ತಡೆಗೆ ಸೇರಬೇಕೆಂಬ ಗುರಿ ಹೊಂದಲಾಯಿತು.ಕದಂಬ ಸಂಸ್ಥೆಯ ವಿಶ್ವೇಶ್ವರ ಕೋಟೆಮನೆ ಸಮಿತಿಯ ರಚನೆ,ಕಾರ್ಯವ್ಯಾಪ್ತಿ, ಸಂಘಟನೆಯ ವಿಧಾನದ ಬಗ್ಗೆ ವಿವರಿಸಿದರು.ಕೊಳ್ಳ ಸಮಿತಿಯ ಸಂಚಾಲಕರಾದ ವಿಶ್ವನಾಥ ಹೆಗಡೆ ಶೀಗೆಹಳ್ಳಿ, ಜಿ.ಆರ್ ಹೆಗಡೆ ಬೆಳ್ಳೆಕೇರಿ ಹೋರಾಟದ ಸ್ವರೂಪದ ಬಗ್ಗೆ ವಿವರಿಸಿದರು.

 

ವಿವಿಧ ಭಾಗಗಳಿಂದ ಆಗಮಿಸಿದ್ದ ವರು ಸಭೆಯಲ್ಲಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.ಸಭೆಯಲ್ಲಿ ಪ್ರಮುಖ ರುಗಳಾದ ಉಮೇಶ ಭಾಗ್ವತ ಕಳಚೆ, ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ರಾಘವೇಂದ್ರ ಭಟ್ಟ ಹಾಸಣಗಿ,ಅಪ್ಪು ಆಚಾರಿ,ಭಾಸ್ಕರ ಸಿದ್ದಿ ಕಂಪ್ಲಿ,ವೆಂಕಟ್ರಮಣ ಕಿರಕುಂಭತ್ತಿ,ಎಂ.ಕೆ.ಭಟ್ಟ ಯಡಳ್ಳಿ,ವಿಶ್ವನಾಥ ಬಾವಣಕೊಪ್ಪ,ಜಾನು ಘಾಡಿ,ಅನಂತ ಗಾಂವ್ಕಾರ್, ಕಂಚೀಪಾಲ್,ಮಹೇಶ ಕುಣಬಿ,ಗಣೇಶ ಕುಣಬಿ ಕೈಗಡಿ,ಶಶಾಂಕ ಹೆಗಡೆ,ಕೆ.ಟಿ.ಹೆಗಡೆ,ಕಾವೇರಿ ಭಾಗ್ವತ್,ಪ್ರಸಾದ ಹೆಗಡೆ,ಗಣಪತಿ ಬೋಳಗುಡ್ಡೆ,ನಾಗರಾಜ ಸಿದ್ದಿ,,ವಿಶ್ವನಾಥ ಹಳೆಮನೆ,ರಘುಪತಿ ಕಂಪ್ಲಿ,ಮಂಜುನಾಥ ಆಚಾರಿ,ಕೆ.ಟಿ.ಹೆಗಡೆ ಚಿಕ್ಕೊರಗಿ, ವಿಘ್ನೇಶ್ವರ ಕಟ್ಟೆಗದ್ದೆ,ವೆಂಕಟ್ರಮಣ ಬೆಳ್ಳಿ,ಕೊಳ್ಳ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಮುಂತಾದವರು ಪಾಲ್ಗೊಂಡಿದ್ದರು.