ಸುದ್ದಿ ಕನ್ನಡ ವಾರ್ತೆ

ಜಪಾನ್:ನಿಶ್ಶಿನ್ ನ ಐಚಿ ಪ್ರಿಫೆಕ್ಚರಲ್ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಏಷ್ಯನ ಗೇಮ್ಸ್ 2026 ರ ಮಹಿಳಾ ಟಿ 20 ಟೂರ್ನಿಯ ಪೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮಹಿಳೆಯರ ತಂಡವು ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತು.ಬೃಹತ್ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡ ಆರಂಭದಲ್ಲೇ ಕುಸಿತ ಕಂಡು 15.4 ಓವರ್‌ಗಳಲ್ಲಿ 69 ರನ್‌ಗೆ ಸರ್ವಪತನ ಕಂಡಿತು.

​ಚೇಸಿಂಗ್ ವೇಳೆ ಲಂಕಾಗೆ ಯಾವುದೇ ಹಂತದಲ್ಲೂ ಉತ್ತಮ ಜೊತೆಯಾಟದ ನೆರವು ಸಿಗಲಿಲ್ಲ. ನಾಯಕಿ ಚಾಮರಿ ಅಟಪಟ್ಟು(29) ಅವರದ್ದೇ ಹೆಚ್ಚಿನ ಗಳಿಕೆ. ಅರೆಕಾಲಿಕ ಸ್ಪಿನ್ನರ್ ಶಫಾಲಿ ವರ್ಮ, ಅನುಭವಿಗಳಾದ ದೀಪ್ತಿ ಶರ್ಮಾ(6ಕ್ಕೆ 3) ಮತ್ತು ಶ್ರೇಯಕರಣಿ ಅವರ ಸ್ಪಿನ್ ಜಾದೂಗೆ ಮಂಕಾದ ಲಂಕಾ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು.147 ರನ್‌ಗಳಿಂದ ಶ್ರೀಲಂಕಾದ ತಂಡವನ್ನು ಸೋಲಿಸುವ ಮೂಲಕ ಭಾರತದ ಮಹಿಳಾ ಕ್ರಿಕೆಟ್ ತಂಡವು ವಿಜಯಿಯಾಯಿತು.ಭಾರತದ ಬ್ಯಾಟಿಂಗ್ ಮುಖ್ಯಾಂಶಗಳು:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಆರಂಭಿಕ ಆಟಗಾರ್ತಿಯರು ಸ್ಫೋಟಕ ಆರಂಭ ನೀಡಿದರು.
​ಸ್ಮೃತಿ ಮಂಧಾನ: ಕೇವಲ 45 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 79 ರನ್ ಚಚ್ಚಿದರು.
​ರಿಚಾ ಘೋಷ್: ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ 22 ಎಸೆತಗಳಲ್ಲಿ 49 ರನ್ (3 ಸಿಕ್ಸರ್, 6 ಬೌಂಡರಿ) ಗಳಿಸಿ ಅಲ್ಪ ರನ್‌ಗಳಿಂದ ಅರ್ಧಶತಕ ವಂಚಿತರಾದರು.
​ಶಫಾಲಿ ವರ್ಮಾ: 29 ಎಸೆತಗಳಲ್ಲಿ 48 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕೊಡುಗೆ ನೀಡಿದರು.​ಪಂದ್ಯದ ಸಂಕ್ಷಿಪ್ತ ಸ್ಕೋರ್ ವಿವರ
​ಭಾರತ ಮಹಿಳಾ ತಂಡ: 20 ಓವರ್‌ಗಳಲ್ಲಿ 216/3
​ಶ್ರೀಲಂಕಾ ಮಹಿಳಾ ತಂಡ: 15.4 ಓವರ್‌ಗಳಲ್ಲಿ 69/10 (ಆಲ್-ಔಟ್)
​ಫಲಿತಾಂಶ: ಭಾರತಕ್ಕೆ 147 ರನ್‌ಗಳ ಜಯ ಹಾಗು ಚಿನ್ನದ ಪದಕ. ಶ್ರೀಲಂಕಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ.