ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಾಪ್ಸಾದ ಬಸ್ ನಿಲ್ದಾಣದ ಬಳಿ ಕವಿಶೈಲ ಕನ್ನಡ ಸಂಘ ಮಾಪ್ಸಾ ವತಿಯಿಂದ ಪ್ರತಿ ವರ್ಷದಂತೆಯೇ ಈ ವರ್ಷವೂ ಕನ್ನಡ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ. ಕನ್ನಡ ಗಣಪನ ದರ್ಶನ ಪಡೆಯಲು ಗೋವಾದ ವಿವಿದೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ.
ಈ ಕುರಿತಂತೆ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭುಶೆಟ್ಟರ್ ಮಾಹಿತಿ ನೀಡಿ- ಆಗಮಿಸಿದ ಭಕ್ತರಿಗೆ ಮಧ್ಯಾನ್ಹ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ವರ್ಷದಂತೆಯೇ ಪ್ರಸಕ್ತ ವರ್ಷವೂ ಕೂಡ 9 ದಿನಗಳ ಕಾಲ ಕನ್ನಡ ಗಣಪನ ಪೂಜೆ ನೆರವೇರಿಸಿ ಅದ್ದೂರಿಯ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಗುವುದು. ಪ್ರತಿದಿನ ಕನ್ನಡ ಗಣಪನ ದರ್ಶನಕ್ಕೆ ಗೋವಾದ ಸ್ಥಳೀಯರು ಮತ್ತು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
