ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧೆಡೆ ಈ ವರ್ಷದ ಗಣೇಶ ಚತುರ್ಥಿ ಹಬ್ಬದ ಆಚರಣೆ ಅತ್ಯಂತ ವೈಭವ ಮತ್ತು ಸಂಭ್ರಮದಿಂದ ಜರುಗುತ್ತಿದೆ.

ನಂದಿಗದ್ದೆಯ ಸುವರ್ಣ ಮಹೋತ್ಸವದ ಶ್ರೀ ಗಜಾನನೋತ್ಸವ, ಯರಮುಖದ ಗಜಾನೋತ್ಸವ ಸಮಿತಿಯ 41ನೇ ವರ್ಷದ ಆಚರಣೆ ಹಾಗೂ ಯರಮುಖ ಜನತಾ ಕಾಲೋನಿಯ 20ನೇ ವರ್ಷದ ಗಜಾನೋತ್ಸವಗಳು ಸಾರ್ವಜನಿಕರ ಗಮನ ಸೆಳೆಯುತ್ತಿದ್ದು, ಹಬ್ಬದ ಸಂಭ್ರಮ ಎಲ್ಲೆಡೆ ವಿಜೃಂಬಿಸಿದೆ.

ಧಾರ್ಮಿಕ ಹಾಗೂ ಸಾಂಸ್ಕೃತಿಕ ನಡೆ.
ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಮಹಾಗಣಪತಿಗೆ ವಿಶೇಷ ಗಣಹವನ ಹಾಗೂ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು ಭಕ್ತಿಯಿಂದ ನೆರವೇರುತ್ತಿವೆ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಹಬ್ಬದ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಂದಿಗದ್ದೆಯಲ್ಲಿ ವಿಶೇಷವಾಗಿ ನಾಟಕ, ಯಕ್ಷಗಾನ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ಕಳೆಗಟ್ಟಿದ್ದರೆ, ಯರಮುಖ ಭಾಗದಲ್ಲಿ ಆರ್ಕೆಸ್ಟ್ರಾ, ಭಕ್ತಿಪೂರ್ವಕ ಕೀರ್ತನೆ, ಊರಿನ ಮಕ್ಕಳಿಂದ ಭಜನೆ ಹಾಗೂ ನೃತ್ಯ ಕಾರ್ಯಕ್ರಮಗಳು ನೆರೆದಿದ್ದ ಸಾರ್ವಜನಿಕರನ್ನು ರಂಜಿಸಲಿವೆ
ನಂದಿಗದ್ದೆ ಗಜಾನೋತ್ಸವ ಸಮಿತಿ ಅಧ್ಯಕ್ಷ ಅಜಿತ ಹೆಗಡೆ, ಯರಮುಖ ಗಜಾನೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಭಟ್ಟ ಹಾಗೂ ಯರಮುಖ ಜನತಾ ಕಾಲೋನಿ ಗಜಾನೋತ್ಸವ ಸಮಿತಿ ಅಧ್ಯಕ್ಷ ಗಣಪತಿ ಮಾಂಜ್ರೇಕರ ಅವರ ನೇತೃತ್ವದಲ್ಲಿ ಭಕ್ತಾದಿಗಳಿಗೆ ಅತ್ಯಂತ ಅಚ್ಚುಕಟ್ಟಾಗಿ ಪ್ರಸಾದ,ಮಹಾಪ್ರಸಾದ ಹಾಗೂ ಧಾರ್ಮಿಕ ಪೂಜೆಗಳನ್ನು ಆಯೋಜಿಸಲಾಗಿದ್ದು. ಅಚ್ಚು ಕಟ್ಟಾಗಿ ನಡೆದಿದೆ.ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಮನೆ. ಮನೆ.ಚೌತಿ ಹಬ್ಬವನ್ನು ಆಚರಿಸುತ್ತಾ ಸಾರ್ವಜನಿಕ ವಾಗಿ ಕೂಡ ಅತ್ಯಂತ ಯಶಸ್ವಿಯಾಗಿ ನಡೆಸುತ್ತಿದ್ದಾರೆ.

ಇಂದು ಜನತಾ ಕಾಲೋನಿ ಭಕ್ತರು ಗಣಪತಿಯನ್ನು ವಿಸರ್ಜಿಸಿದರೆ, ಬುಧವಾರ ನಂದಿಗದ್ದೆ ಮತ್ತು ಯರಮುಖ ಗಳಲ್ಲಿ ಶ್ರೀ ದೇವರ ವಿಸರ್ಜನೆ ನಡೆಯಲಿದೆ. ಇಂದು ಕೂಡ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿದ್ದು ಭಕ್ತರು, ವಾರ್ಷಿಕ ಉತ್ಸವದ ಸವಿಯನ್ನು ಸವಿಯಲಿದ್ದಾರೆ, ತಾಲೂಕಿನ ವಿವಿದೆಡೆಯಲ್ಲಿ 11 ದಿನಗಳ ಕಾಲ ಶ್ರೀ ಗಣೇಶೋತ್ಸವ ನಡೆಯುವದು.