ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ತಾಲ್ಲೂಕಿನ ಹೆಮ್ಮೆಯ ಸಂಸ್ಥೆಯಾದ “ಕಾಳಿ ಪ್ರವಾಸೋದ್ಯಮ ಸಂಸ್ಥೆ” ಯ ೧೭ ನೇ ವಾರ್ಷಿಕ ಸಾಮಾನ್ಯ ಸಭೆಯು ಜೋಯಡಾದಲ್ಲಿ ಜರುಗಿತು.

ಸಂಸ್ಥೆಯ ಅಧ್ಯಕ್ಷರಾದ ವಿನಯ್ ದೇಸಾಯಿಯವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುದರ್ಶನ ಹೆಗಡೆ ಸಂಸ್ಥೆಯ ವಾರ್ಷಿಕ ವರದಿ ಓದಿದರು. ಖಜಾಂಚಿ ಡಾ. ಜಯಾನಂದ ಡೇರೆಕರ್ ಲೆಕ್ಕಪತ್ರ ಮಂಡಿಸಿದರು. ಗೌರವ ಅಧ್ಯಕ್ಷರಾದ ರವಿ ರೇಡಕರ್ ಸಭೆಗೆ ಮಾರ್ಗದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಸುನೀಲ್ ದೇಸಾಯಿ, ಮಾಜಿ ಕಾರ್ಯದರ್ಶಿ ಆರ್ ಎನ್ ಹೆಗಡೆ, ರಾಹುಲ್ ಬಾವಾಜಿ, ಹಿರಿಯ ಪ್ರವಾಸೋದ್ಯಮಿ ಅಜಿತ್ ಟೆಂಗ್ಸೆ, ಕೆ ಎನ್ ಮ್ಹಾರ್ದೋಳಕರ್, ರಾಜೇಂದ್ರ ವೇಟೆ, ಸತೀಶ್ ನಾಯ್ಕ್, ದತ್ತಾ ದೇಸಾಯಿ, ಪರಶುರಾಮ ಶೇಟ್ಕರ್, ಯೋಗೇಶ ಡೇರೆಕರ್, ಅಜಿತ್ ಮಿರಾಶಿ, ಗಣಪತಿ ಗಾವಡಾ, ವಿನಾಯಕ ಮುಂತಾದ ಪ್ರವಾಸೋದ್ಯಮಿ ಸದಸ್ಯರು ಉಪಸ್ಥಿತರಿದ್ದರು.