ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಕನ್ನಡ ಸಮಾಜ ಪಣಜಿಯ ಕಛೆರಿಯಲ್ಲಿ ವಾರ್ಷಿಕ ಪದ್ಧತಿಯಂತೆಯೇ ಮಂಗಳವಾರ  ಸಂಜೆ ಶ್ರೀಸತ್ಯನಾರಾಯಣ ಪೂಜೆ ಆಯೋಜಿಸಲಾಗಿತ್ತು. ಕನ್ನಡ ಸಮಾಜದ ಸಹಕಾರ್ಯದರ್ಶಿಗಳಾದ ಪ್ರಹ್ಲಾದ ಗುಡಿ ದಂಪತಿಗಳು ಸಮಾಜದ ಪರವಾಗಿ ಪೂಜೆಯ ಯಜಮಾನತ್ವಕ್ಕೆ ಕುಳಿತು ಪೂಜೆ ಸೆರವೇರಿಸಿದರು.


ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್, ಕಾರ್ಯದರ್ಶಿ ಶ್ರೀಕಾಂತ ಲೋಣಿ, ಉಪಾಧ್ಯಕ್ಷ ಶ್ರೀನಿವಾಸ್ ಪೈ, ಖಜಾಂಚಿ ಸಂದೇಶ ಗಾಡವಿ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಸೇರಿದಂತೆ ಸಮಾಜದ ಮಾಜಿ ಅಧ್ಯಕ್ಷರು, ಕಾರ್ಯಕಾರಿ ಸಮೀತಿಯ ಸದಸ್ಯರು, ಸದಸ್ಯರು , ಕನ್ನಡಿಗರು ಹೆಚ್ಚಿನ ಸಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

ವಾಣಿಶ್ರೀ ಭಟ್ ರವರ ನೇತೃತ್ವದ ಲಲಿತಾ ಭಜನಾ ಮಂಡಳಿಯ ಮಾತೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ವೈದಿಕರಾದ ಶ್ರೀಧರ್ ಭಟ್ ರವರು ಪೂಜೆ ನೆರವೇರಿಸಿದರು.