ಸುದ್ದಿ ಕನ್ನಡ ವಾರ್ತೆ
ಶಿರಸಿ ಅರಣ್ಯ ಸಂಚಾರಿ ದಳದ ಕಾರ್ಯಾಚರಣೆ ಯಲ್ಲಿ ಬಂಧಿತರಿಂದ 15.748 ಕೆ.ಜಿ. ಪ್ಯಾಂಗೋಲಿನ್ ಚಿಪ್ಪುಗಳು, 2 ಭಾರತೀಯ ಕಾಡೆಮ್ಮೆ ಕೊಂಬುಗಳು,8 ಹುಲಿ ಉಗುರುಗಳು,12 ಚಿರತೆ ಉಗುರುಗಳು,2 ಹುಲಿ ಹಲ್ಲುಗಳು,3 ಚಿರತೆ ಹಲ್ಲುಗಳು,6 ಕಾಡುಹಂದಿ ಹಲ್ಲುಗಳು,1 ಬೈಕ್,1 ಸ್ಕೂಟರ್ ವಶಕ್ಕೆಪಡೆಯಲಾಗಿದೆ
ಉ.ಕ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಉಪ್ಪಳೇಶ್ವರ ಗ್ರಾಮದಲ್ಲಿ ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ವಶಕ್ಕೆಪಡೆಯಲಾಗಿದೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲುಮಾಡಲಾಗಿದೆ
ಈ ಜಾಲದಲ್ಲಿ ತಲೆಮರೆಸಿಕೊಂಡಿರುವ ಇತರರಿಗಾಗಿ ತೀವ್ರ ಶೋಧಕಾರ್ಯ ನಡೆದಿದೆ.
ಸಂಚಾರಿ ಧಳದ ಹಿರಿಯ ಅಧಿಕಾರಿ ಮನೋಜ್ ತ್ರಿಪಾಠಿ, ಅಪರಾಧ ನಿಯಂತ್ರಣ ಘಟಕ ಹಾಗೂ DCF ಸಂದೀಪ್ ಸೂರ್ಯವಂಶಿ, ಅವರ ಮಾರ್ಗದರ್ಶನದಲ್ಲಿ, ACF ರಾಘವೇಂದ್ರ ನಾಯಕ್ ಹಾಗೂ RFO ಶಿಲ್ಪಾ ನಾಯಕ್ ಮತ್ತು ಸಿರ್ಸಿಯ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾಗಿ ತಿಳಿದು ಬಂದಿದೆ. ಇಷ್ಟೆಲ್ಲ ಸಂಗ್ರಹಣೆ ಯಾದರೂ ಸ್ಥಳೀಯ ಅರಣ್ಯ ವಿಭಾಗ, ಸಿಬ್ಬಂದಿಗಳು ಏನು ಮಾಡುತ್ತಿದ್ದರು ಎಂಬ ಚರ್ಚೆ ಸಾರ್ವಜನಿಕ ರಲ್ಲಿ ಕಾಡಿದೆ, ರೈತ ಸೊಪ್ಪು ಕಡಿದರೂ ಬರುವ ಇಲಾಖೆಯ ಸಿಬ್ಬಂದಿಗಳಿಗೆ, ಈ ವಾಸನೆ ಯಾಕೆ ಬಂದಿಲ್ಲ, ಎಂಬ ಕಳಕಳಿ ಕಾಡಿದೆ.
