Banner Ad

ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ:ರಾಷ್ಟ್ರೀಯ ಹೆದ್ದಾರಿ ೬೩ ಮೇಲೆ ಯಲ್ಲಾಪುರ ತಾಲೂಕಿನ ಇಡಗುಂದಿಯ ಬಳಿ ಸರಕು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣತಪ್ಪಿ ಗದ್ದೆಗೆ ಉರುಳಿ ಬಿದ್ದಿದೆ.

ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಹೊರಟ್ಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಬಲಬದಿಗೆ ಹೋಗಿ ಸುರಕ್ಷತೆಗೆ ಅಳವಡಿಸಿದ ತಡೆಬೇಲಿ ಹಾಗೂ ವಿದ್ಯುತ ಕಂಬ ಮುರಿದು ಗದ್ದೆಗೆ ಉರುಳಿ ಬಿದ್ದಿದೆ.ಲಾರಿ ಸಂಪೂರ್ಣ ಜಖಂ ಆಗಿದ್ದು,ಚಾಲಕ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Banner Ad
Banner Ad