ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನಲ್ಲಿ ಸಮಸ್ಯೆಗಳು ತುಂಬಾ ಆದರೆ ಯಾರೂ, ಯಾವ ರಾಜಕೀಯ ಪಕ್ಷದವರೂ ಜನರ ಕೊರತೆ, ಸಮಸ್ಯೆ ಗಳಿಗೆ ಸ್ಪಂದಿಸುತ್ತಿಲ್ಲ ರಸ್ತೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು. ವಿದ್ಯುತ್, ಮೊಬೈಲ್ ನೆಟ್ವರ್ಕ್, ಅರಣ್ಯ ಹಕ್ಕು, ನ್ಯಾಯಾಲಯ, ಬಸ್ ಡಿಪೋ,ಸೇರಿದಂತೆ ಹಲವು ಸಮಸ್ಯೆಗಳು ತಾಲೂಕಿನ ಜನರನ್ನು ಕಾಡುತ್ತಿವೆ. ಆದರೆ ಈ ಸಮಸ್ಯೆಗಳನ್ನು ಆಡಳಿತದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಿ, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ನಿರಂತರವಾಗಿ ಹೋರಾಟ ನಡೆಸುವ ಸಮರ್ಥ ರಾಜಕೀಯ ನಾಯಕತ್ವದ ಕೊರತೆ ತಾಲೂಕಿನಲ್ಲಿ ಎದ್ದು ಕಾಣುತ್ತಿದೆ.
ಹಿಂದಿನ ಜಿಲ್ಲಾ ಪಂಚಾಯಿತಿ ಸದಸ್ಯ ವಿಲಾಸ ನಾಯ್ಕ ಅವರ ನಿಧನದ ಬಳಿಕ ತಾಲೂಕಿನ ರಾಜಕೀಯದಲ್ಲಿ ಉಂಟಾದ ಶೂನ್ಯತೆ ಇನ್ನೂ ತುಂಬಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಪದೇ ಪದೇ ಕೇಳಿಬರುತ್ತಿದೆ.
ವಿಲಾಸ್ ನಾಯ್ಕ್ ನಿಧನದ ನಂತರ ಸ್ಥಳೀಯ ಮಟ್ಟದಲ್ಲೂ ಪ್ರಬಲ ನಾಯಕತ್ವ ಬೆಳೆದು ಬರಲಿಲ್ಲ, ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಅಧಿಕಾರಿಗಳ ಗಮನಕ್ಕೆ ತರುವುದು, ನಂತರ ಕೆಲಸ ಮಾಡುವುದು, ನಡೆಯಲೇ ಇಲ್ಲ. ಹಿಂದೆ ಒಬ್ಬ ಶಾಸಕರು ಮಾಡುವ ಕೆಲಸ ವನ್ನು ವಿಲಾಸ್ ನಾಯ್ಕ್ ಮಾಡುತ್ತಿದ್ದರು ಆದರೆ ಅವರ ನಿಧನದ ಬಳಿಕ ತಾಲೂಕಿನ ರಾಜಕೀಯದಲ್ಲಿ ಆ ರೀತಿಯ ಸ್ಪಷ್ಟ ಹಾಗೂ ನೇರ ಧ್ವನಿ ಕಾಣೆಯಾಗಿದೆ,ಕ್ಷೆತ್ರದ ಶಾಸಕರು ಒಬ್ಬರೇ ಎಲ್ಲ ವನ್ನು ಜೊತೆಗೆ ದೈನಂದಿನ ಸಮಸ್ಯೆ ಗಳನ್ನು ಪರಿಹರಿಸಲು ಸಾಧ್ಯವಿಲ್ಲ, ಅವರಿಗೆ ಜೊತೆಗೆ ಇನ್ನೆರಡು ತಾಲೂಕು ಗಳು ಮತ್ತು ರಾಜ್ಯದ ಕೆಲಸಗಳು ಇರುತ್ತವೆ.. ಸ್ಥಳೀಯವಾಗಿ ಸಮರ್ಥ ನಾಯಕತ್ವದ ಕೊರತೆ ಇದ್ದು,ಸ್ಥಳೀಯರಿಗೆ ಸಮಸ್ಯೆಗಳಿಗಿಂತ ತಮ್ಮ ರಾಜಕೀಯವೇ ಮುಖ್ಯವಾಗುತ್ತಿದೆಯೇ? ಎಂಬ ಪ್ರಶ್ನೆಯೂ ಈಗ ಕೇಳಿಬರುತ್ತಿದೆ.
ಸ್ಥಳೀಯ ಜನಪ್ರತಿನಿಧಿಗಳು ಕೇವಲ ಚುನಾವಣೆಯ ಸಂದರ್ಭದಲ್ಲಿ ಜನರ ಮುಂದೆ ಕಾಣಿಸಿಕೊಳ್ಳುವ ಗೊಂಬೆ ಆಗಬಾರದು ರಸ್ತೆ ಸಮಸ್ಯೆಯಿಂದ ಹಿಡಿದು ಶಿಕ್ಷಣದವರೆಗೆ, ನೀರಿನಿಂದ ಹಿಡಿದು ಅರಣ್ಯ ಹಕ್ಕಿನವರೆಗೆ, ಜನರ ಸಮಸ್ಯೆಗಳಿಗೆ ಅಧಿಕಾರಿಗಳನ್ನು ಪ್ರಶ್ನಿಸಿ, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪರಿಹಾರಕ್ಕಾಗಿ ನಿರಂತರವಾಗಿ ಪ್ರಯತ್ನಿಸುವವರಾಗಬೇಕು ಕೇವಲ ಹೆಸರಿಗೆ ಅಧಿಕಾರ ಹಿಡಿದು, ತಾಲೂಕಿಗೆ ಮೂಲಭೂತ ವಾಗಿ ಇರಬೇಕಾದ, ರಸ್ತೆ ಸೇತುವೆ, ಕುಡಿಯುವ ನೀರು, ಬಸ್ ಘಟಕ, ನ್ಯಾಯಾಲಯ,ಇನ್ನಿತರ ಯಾವುದನ್ನೂ, ವಿಚಾರಿಸದೇ, ಕೇವಲ ಅಧಿಕಾರ, ಹಿಡಿದು ಇರಬಾರದು, ತಾಲೂಕಿನ ಸಮಸ್ಯೆ ಯೂ ಇದೇ ಆಗಿದೆ ಯಾವ ಪಕ್ಷ ದವರಿಗೂ ತಾಲೂಕಿನ ಜನರ ಸಮಸ್ಯೆ ಬೇಡ ವಾಗಿದೆ, ಆದರೆ ಅಧಿಕಾರ ಬೇಕಾಗಿದೆ, ಸ್ಥಳೀಯ ಜನತೆಗೆ ಕುಡಿಯಲು ನೀರಿಲ್ಲ, ಬೇರೆ ತಾಲೂಕಿಗೆ ನೀರು ಹೋಗುತ್ತಿದ್ದರೂ, ನಮಗೆ ನೀರು ಕೊಟ್ಟು ನೀರು ಒಯ್ಯಿರಿ ಎಂದು ಕೇಳುವ ತಾಕತ್ತು ಯಾವ ಪಕ್ಷ ದವರಿಗೂ ಇಲ್ಲ, ಆದರೆ ವಿಲಾಸ್ ನಾಯ್ಕ್ ಇದ್ದಿದ್ದರೆ, ಈ ರೀತಿಯ ನಡೆಗಳು ನಡೆಯುತ್ತಿರಲಿಲ್ಲ, ಉತ್ತಮ ಆಡಳಿತ ಗಾರನನ್ನು ಕೆಳೆದು ಕೊಂಡೆವು ಎಂಬ ಚಿಂತೆ ಜನತೆಯನ್ನು ಕಾಡುತ್ತಿದೆ . ಮುಂದೆ ಬರುವ ಬೇರೆ ಬೇರೆ ಚುನಾವಣೆ ಗಳಲ್ಲಿ ತಾಲೂಕಿಗೆ ಬೇಕಾದ ನ್ಯಾಯಾಲಯ, ಸಾರಿಗೆ ಘಟಕ ಸೇರಿದಂತೆ ಮೂಲಭೂತ ಸೌಕರ್ಯ ಗಳನ್ನು ಮಾಡಿಕೊಳ್ಳದೆ ಇದ್ದರೆ, ಕಸ್ತೂರಿ ರಂಗನ್ ವರದಿ ಮತ್ತು ಅರಣ್ಯ ಇಲಾಖೆಯ ವಿವಿಧ ಮತ್ತಷ್ಟು ಯೋಜನೆ ಗಳನ್ನು ದಾಂಡೇಲಿ ಹೆಸರಿನಲ್ಲಿ ತಂದು ತಾಲೂಕನ್ನು ಇನ್ನಿಲ್ಲದಂತೆ ಮಾಡುವ ಹುನ್ನಾರ ನಡೆದರೂ ಅಚ್ಚರಿ ಪಡಬೇಕಿಲ್ಲ, ಎಂಬ ಅರಿವು ಸಾಕಷ್ಟುಜನರಿಗೆ ಬರಲಿ, ಆಗಲಾದರೂ ತಾಲೂಕಿನ ಜನತೆ ಮತ ಹಾಕುವ ಮುನ್ನ ಮೂಲ ಸೌಕರ್ಯ ಪಡೆದು ಕೊಂಡು, ತಾಲೂಕನ್ನು ಹಿಂದಿನವರು ಉಳಿಸಿ ಕೊಂಡು ಬಂದಂತೆ ಉಳಿಸಿ ಕೊಳ್ಳುವ ಗಟ್ಟಿ ನಿರ್ದಾರ ಮಾಡಬೇಕಾಗಿದೆ, ಉತ್ತಮ ನಾಯಕ ನನ್ನು ಬೆಳೆಸಿ ಕೊಂಡು ನಮ್ಮ ಸಮಸ್ಯೆಗೆ ನಾವೇ ಉತ್ತರ ಕಂಡು ಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲವು ಗ್ರಾಮ ಪಂಚಾಯತ್ ಗಳಲ್ಲಿ ಉತ್ತಮ ನಾಯಕತ್ವದ ಗುಣ ಲಕ್ಸಣ ಗಳುಳ್ಳ ಯುವ ನಾಯಕರು ಸಿದ್ದರಾಗುತ್ತಿದ್ದು ಅವರನ್ನು ಪ್ರೋತ್ಸಾಹಿಸ ಬೇಕಾಗಿದೆ. ಅಂದರೆ ಮಾತ್ರ ತಾಲೂಕು ಉಳಿದು ಬೆಳೆಯಲು ಸಾಧ್ಯ. ಎಂಬ ಮಾತುಗಳು ಕೇಳಿ ಬಂದಿವೆ.
