ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ:ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಕುಚಗುಂಡಿಯ ಕಲ್ಯಾಣೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹಾಗೂ ತಾರೇಸರದ ಸಭಾಭವನದಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರಕ್ಕೆ ಸೋಮವಾರ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಜನರಿಗೆ ಅನುಕೂಲ ವಾಗುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೊಲಿಗೆ ತರಬೇತಿ ಪಡೆದರೆ ಸ್ವಾವಲಂಬಿಯಾಗಿ ಬದುಕಲು ಸಾಧ್ಯವಿದೆ. ಬದುಕಿನ ದೊಡ್ಡ ರೋಗ ಎಂದರೆ ಅದು ಬಡತನ. ಬಡತನವನ್ನು ಹೋಗಲಾಡಿಸಲು ಹೊಲಿಗೆ ಉದ್ಯೋಗ ಮಹಿಳೆಯರಿಗೆ ಬಹಳ ಅನುಕೂಲವಾಗಲಿದೆ. ಹೊಲಿಗೆ ಯನ್ನು ಪ್ರತಿಯೊಬ್ಬ ಮಹಿಳೆಯರೂ ಕಲಿತುಕೊಳ್ಳಬೇಕು. ಮನೆಯಲ್ಲೆ ಕುಳಿತು ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು.ತರಬೇತಿಯ ಅನುಕೂಲವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಮನುಷ್ಯನ ಜೀವನದ ಕೊನೆಯ ವರೆಗೂ ಕಲಿಕೆ ನಿರಂತರವಾಗಿರಲಿದೆ. ಪ್ರತಿನಿತ್ಯ ಒಂದಲ್ಲ ರೀತಿಯಲ್ಲಿ ನಾವು ಕಲಿಯುತ್ತಲೇ ಇರುತ್ತೇವೆ. ಮೊದಲು ಕಲಿಯಬೇಕು ನಂತರ ಸಂಪಾದಿಸಬೇಕು. ನುರಿತ ತರಬೇತಿ ದಾರರು ತರಬೇತಿಯನ್ನು ನೀಡಲಿದ್ದಾರೆ . ಉತ್ತಮವಾದ ಹೊಲಿಗೆ ಯಂತ್ರವನ್ನೂ ನೀಡಲಾಗಿದೆ. ಈ ಒಂದು ತಿಂಗಳ ಅವಕಾಶವನ್ನು ಉತ್ತಮವಾಗಿ ಸದ್ಬಳಕೆ ಮಾಡಿಕೊಳ್ಳಬೇಕು .
ಮಹಿಳೆಯರು ಸ್ವಾವಲಂಬಿಯಾಗಿ ಉದ್ಯೋಗವನ್ನು ಮಾಡುತ್ತಾ ಆರ್ಥಿಕವಾಗಿ ಸದೃಢವಾಗಿರಬೇಕು. ಆ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರವನ್ನು ಮಹಿಳೆಯರು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢವಾಗಬೇಕು ಎಂಬುದೇ ಈ ಶಿಬಿರದ ಉದ್ದೇಶ. ಆತ್ಮೀಯತೆಯೇ ಸಮಾಜದಲ್ಲಿ ಸಾಮರಸ್ಯ ತರಲು ಸಾಧ್ಯ. ಆ ಸಾಮರಸ್ಯ ಇಂತಹ ತರಬೇತಿ ಶಿಬಿರಗಳಿಂದ ಬೆಳೆಯುತ್ತದೆ ಎಂದರು.
ಹಸ್ರಗೋಡ ಗ್ರಾಪಂ ಮಾಜಿ ಅಧ್ಯಕ್ಷ ಪ್ರದೀಪ ಹೆಗಡೆ ಕರ್ಜಗಿ ಮಾತನಾಡಿ, ಹಳ್ಳಿಗಳಲ್ಲಿನ ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ನೀಡಬೇಕು ಎಂಬ ಬಹುದೊಡ್ಡ ಕನಸು ಅನಂತಮೂರ್ತಿ ಹೆಗಡೆ ಯವರಲ್ಲಿತ್ತು. ಆ ಕನಸು ಇಂದು ನನಸಾಗುತ್ತಿದೆ. ಮಹಿಳೆಯರಿಗೆ ಸ್ವ ಉದ್ಯೋಗದಿಂದ ಕುಟುಂಬ ನಿರ್ವಹಣೆ ಮಾಡುವ ಶಕ್ತಿ ಬರಬೇಕು ಎಂಬುದೇ ಈ ಕಾರ್ಯಕ್ರಮದ ಉದ್ದೇಶ ಎಂದರು .
ನಾರಾಯಣ ಹೆಗಡೆ ತಾರೇಸರ ಮಾತನಾಡಿ, ಹೊಲಿಗೆ ಕಲಿಯುವುದು ಆರ್ಥಿಕ ಸದೃಢತೆಗೆ ಇರುವ ಸುಲಭ ಮಾರ್ಗ. ನಮ್ಮೂರಿನಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಹೊಲಿಗೆ ಶಿಬಿರ ಆರಂಭ ಗೊಂಡಿರುವುದು ಸಂತಸದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಸುಬ್ರಾಯ ಹೆಗಡೆ ಬೇಣದಮನೆ , ಆರ್ ಜಿ ಭಟ್ ಯಲೂಗಾರ,ನಾರಾಯಣ ಹೆಗಡೆ ತಾರೇಸರ, ಗಣೇಶ ಹೆಗಡೆ ಶಮೆಮನೆ , ನವೀನ ಹೆಗಡೆ ತಾರೇಸರ,
ಹೊಲಿಗೆ ತರಬೇತಿ ದಾರರಾದ ವೀಣಾ ಕೊಳಗಿಬೀಸ್, ಆಶಾ ಶಿರಸಿ ಸೇರಿದಂತೆ ಹಲವರು ಇದ್ದರು.
ಅನಂತ ಮೂರ್ತಿ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿದೆ. ಅನಂತಮೂರ್ತಿ ಹೆಗಡೆ ಯವರು ಜಾತಿ ಭೇದ ವಿಲ್ಲದ , ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿತ್ವದವರು. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಹಾಗೂ ಸಹಕಾರ ಮನೋಭಾವದಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಈಗಾಗಲೇ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ. ಇಂತಹ ವ್ಯಕ್ತಿತ್ವದವರು ಸಮಾಜದಲ್ಲಿ ಸಿಗುವುದು ಬಹಳ ವಿರಳ. ಇದೀಗ ಸ್ವಾವಲಂಬಿಯಾಗಿ ಮಹಿಳೆಯರು ಬದುಕಬೇಕು ಎಂಬ ಉದ್ದೇಶದಿಂದ ಅನಂತಮೂರ್ತಿ ಹೆಗಡೆ ಯವರು ಈ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಎಲ್ಲರೂ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು.
ಕಮಲಾಕರ ನಾಯ್ಕ ಹೆರೂರ. ಸ್ಥಳೀಯ ಪ್ರಮುಖರು.
