ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಕ್ಯಾಸಿನೊ ನಿರ್ದೇಶಕ ಶ್ರೀನಿವಾಸ್ ನಾಯಕ್ ಮತ್ತು ಅವರ ಭದ್ರತಾ ಸಿಬ್ಬಂದಿ ಸಶಸ್ತ್ರ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಪರ್ವರಿಯ ಗುಂಡಿನ ಧಾಳಿಯ ಘಟನೆಯ ಮೂರು ದಿನಗಳ ನಂತರ, ಗೋವಾ ಸರ್ಕಾರ ಪ್ರಕರಣವನ್ನು ಕ್ರೈಂ ಬ್ರಾಂಚ್‍ಗೆ ಹಸ್ತಾಂತರಿಸಿದೆ.

ದಾಳಿಕೋರರು ತಲೆಮರೆಸಿಕೊಂಡಿದ್ದರೂ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ವಿಧಾನಸಭಾ ಕಲಾಪತದಲ್ಲಿ ಮಾತನಾಡಿ, ಕ್ರೈಂ ಬ್ರಾಂಚ್ ತನಿಖೆ ನಡೆಸಲಿದೆ ಮತ್ತು ಆರೋಪಿಗಳನ್ನು ಬಂಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. “ಪರ್ವರಿ ಶೂಟೌಟ್ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಕ್ರೈಂ ಬ್ರ್ಯಾಂಚ್ ಗೆ ಹಸ್ತಾಂತರಿಸಲಾಗಿದೆ. ಆರೋಪಿಗಳನ್ನು ಬಂಧಿಸುವ ವಿಶ್ವಾಸ ನಮಗಿದೆ. ತನಿಖೆ ನಡೆಯುತ್ತಿದೆ” ಎಂದು ಅವರು ಸದನದಲ್ಲಿ ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಿಸಿ ಘಟನೆಯ ವಿಷಯ ಮಂಡಿಸಿದ ಗೋವಾ ಫಾರ್ವರ್ಡ್ ಪಕ್ಷದ ಶಾಸಕ ವಿಜಯ್ ಸರ್ದೇಸಾಯಿ ಅವರಿಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸುತ್ತಿದ್ದರು.

ಮೆಜೆಸ್ಟಿಕ್ ಪ್ರೈಡ್ ನಿರ್ದೇಶಕ ಶ್ರೀನಿವಾಸ್ ನಾಯಕ್ ಅವರ ಮೇಲೆ ನಡೆದ ದಾಳಿ ರಾಜ್ಯ ವಿಧಾನಸಭೆ ಮತ್ತು ಪರ್ವರಿ ಪೆÇಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರದಲ್ಲಿ ನಡೆದಿದ್ದು, ಪೆÇಲೀಸರ ಭದ್ರತಾ ಪರಿಸ್ಥಿತಿ ಮತ್ತು ಹೊಣೆಗಾರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂದು ಸರ್ದೇಸಾಯಿ ಸದನದಲ್ಲಿ ಗಮನಸೆಳೆದರು.

ಈ ಘಟನೆಗೆ ಸಂಬಂಧಿಸಿದಂತೆ ಪೆÇಲೀಸರು ಇಲ್ಲಿಯವರೆಗೆ ಸುಲಿಗೆ ಉದ್ದೇಶವನ್ನು ತಳ್ಳಿಹಾಕಿದ್ದಾರೆ ಮತ್ತು ಈ ದಾಳಿಯನ್ನು ಗುತ್ತಿಗೆ ಹಂತಕರು ನಡೆಸಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಆರೋಪಿ ಶೂಟರ್‍ಗಳನ್ನು ರಾಜ್ಯದ ಹೊರಗಿನಿಂದ ಗೋವಾಕ್ಕೆ ಕರೆತರಲಾಗಿದೆಯೇ ಎಂದು ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಒಂದು ತಂಡ ಈಗಾಗಲೇ ಮುಂಬೈನಲ್ಲಿದೆ. ಕೆಲವು ಶಂಕಿತರನ್ನು ಸಹ ಪ್ರಶ್ನಿಸಲಾಗಿದೆ ಎಂಸದಿ ಸಿಎಂ ಮಾಹಿತಿ ನೀಡಿದರು.