ಸುದ್ದಿ ಕನ್ನಡ ವಾರ್ತೆ

ರಾಜ್ಯ ಆಡಳಿತ ಸುಧಾರಣಾ ಸಮೀತಿ ಅಧ್ಯಕ್ಷರು ಹಳಿಯಾಳ. ಜೋಯಿಡಾ ಶಾಸಕರು ಆದ ಆರ್ ವಿ ದೇಶಪಾಂಡೆ ಅವರು ನೀಡಿರುವ ಪ್ರಕಟಣೆ ಯಲ್ಲಿ ಕ್ಷೆತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಗ್ರಾಮೀಣ ಭಾಗದ ಹೆಣ್ಣುಮಕ್ಕಳು ವಸತಿ ಸೌಲಭ್ಯದ ಕೊರತೆಯಿಂದ ಉನ್ನತ ಶಿಕ್ಷಣದ ಅವಕಾಶಗಳಿಂದ ವಂಚಿತರಾಗಬಾರದು ಎಂಬ ಆಶಯದೊಂದಿಗೆ, ನನ್ನ ಮತಕ್ಷೇತ್ರದ ಹಳಿಯಾಳ ಪಟ್ಟಣ ಹಾಗೂ ಜೋಯಿಡಾ ತಾಲೂಕಿನ ಕುಂಬಾರವಾಡಾದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಉದ್ದೇಶಕ್ಕಾಗಿ ಅಗತ್ಯವಿರುವ ನಿವೇಶನಗಳು ಈಗಾಗಲೇ ಲಭ್ಯವಿದೆ. ಪ್ರಸ್ತುತ, ಈ ಎರಡೂ ವಸತಿ ನಿಲಯಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರದಿಂದ ತಲಾ ರೂ.5.00 ಕೋಟಿ ವಿಶೇಷ ಅನುದಾನ ಮಂಜೂರಾಗಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ.

ಈ ವಸತಿ ನಿಲಯಗಳ ನಿರ್ಮಾಣದಿಂದ ಹಳಿಯಾಳ ಮತ್ತು ಜೋಯಿಡಾ ತಾಲೂಕಿನ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿನಿಯರಿಗೆ ಸುರಕ್ಷಿತ, ಸುಸಜ್ಜಿತ ಹಾಗೂ ಗುಣಮಟ್ಟದ ವಸತಿ ಸೌಲಭ್ಯ ದೊರೆಯಲಿದ್ದು, ಅವರು ತಮ್ಮ ಶಿಕ್ಷಣವನ್ನು ಯಾವುದೇ ಅಡಚಣೆಯಿಲ್ಲದೆ ಮುಂದುವರಿಸಲು ಅನುಕೂಲವಾಗಲಿದೆ. ವಿಶೇಷವಾಗಿ, ದೂರದ ಗ್ರಾಮೀಣ ಪ್ರದೇಶಗಳ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣದ ಅವಕಾಶಗಳಿಗೆ ಸಮಾನ ಪ್ರವೇಶ ಕಲ್ಪಿಸುವುದರ ಜೊತೆಗೆ, ಅವರ ಶೈಕ್ಷಣಿಕ ಪ್ರಗತಿ ಹಾಗೂ ಸ್ವಾವಲಂಬಿ ಭವಿಷ್ಯ ನಿರ್ಮಾಣಕ್ಕೆ ಈ ವಸತಿ ನಿಲಯಗಳು ಮಹತ್ವದ ಕೊಡುಗೆ ನೀಡಲಿವೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಸರ್ಕಾರದ ಬದ್ಧತೆಗೆ ಈ ಅನುದಾನವು ಮತ್ತೊಂದು ಪ್ರಮುಖ ಹೆಜ್ಜೆಯಾಗಿದ್ದು, ನನ್ನ ಮತಕ್ಷೇತ್ರದ ಶೈಕ್ಷಣಿಕ ಬಲವರ್ಧನೆಗೂ ಇದು ಸಹಕಾರಿಯಾಗಲಿದೆ. ಮೂಲಸೌಕರ್ಯ

ಈ ಅನುದಾನ ಮಂಜೂರಿಗೆ ಸಹಕರಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶಿವರಾಜ ತಂಗಡಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರಿಗೆ ನನ್ನ ಹೃತ್ತೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕರಾದ ಆರ್.ವಿ.ದೇಶಪಾಂಡೆ ಅವರು ಪ್ರಕಟಣೆ ಯಲ್ಲಿ ಹೇಳಿದ್ದಾರೆ.