Banner Ad

ಸುದ್ದಿ ಕನ್ನಡ ವಾರ್ತೆ

ಹುಡ್ಕೊ ಕ್ಯಾಪಿಟಲ್ ಗೇನ್ ಬಾಂಡ್‌ಗಳ ಅರೆಂಜರ್ ಮತ್ತು ಕಲೆಕ್ಟರ್ ಆಗಿ ಕಣಾಟಕ ಬ್ಯಾಂಕ್ ಮಾನ್ಯತೆ ಪಡೆದಿದೆ. ಈ ಮೂಲಕ ಗ್ರಾಹಕರಿಗೆ ವಿವಿಧ ಹೂಡಿಕೆ ಆಯ್ಕೆಗಳನ್ನು ಒದಗಿಸುವ ಬ್ಯಾಂಕ್‌ನ ಪ್ರಯತ್ನಕ್ಕೆ ಮತ್ತಷ್ಟು ಬಲ ಬಂದಿದೆ.

Banner Ad

ಹೌಸಿಂಗ್ ಆಂಡ್ ಅರ್ಬನ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ಹುಡ್ಕೊ), ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್ (ಆರ್‌ಇಸಿ), ಪವರ್ ಫೈನಾನ್ಸ್ ಕಾರ್ಪೊರೇಷನ್ (PFC) ಹಾಗೂ ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್ (IREc) ಹೊರಡಿಸುವ ಸರ್ಕಾರದ ಬೆಂಬಲಿತ ಕ್ಯಾಪಿಟಲ್ ಗೇನ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಕರ್ಣಾಟಕ ಬ್ಯಾಂಕ್ ಮೂಲಕ ಗ್ರಾಹಕರಿಗೆ ಅವಕಾಶ ದೊರೆಯಲಿದೆ.

 

ದೀರ್ಘಾವಧಿಯ ಬಂಡವಾಳ ಲಾಭದ ಮೇಲಿನ ತೆರಿಗೆ ಉಳಿತಾಯಕ್ಕೆ ಅರ್ಹ ತೆರಿಗೆದಾರರಿಗೆ ಕ್ಯಾಪಿಟಲ್ ಗೇನ್ ಬಾಂಡ್‌ಗಳು ಅವಕಾಶ ಕಲ್ಪಿಸುತ್ತವೆ. ಸರ್ಕಾರದ ಬೆಂಬಲಿತ ಹೂಡಿಕೆ ಸಾಧನವಾಗಿರುವುದರಿಂದ ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿಯೂ ಇದು ಪರಿಗಣಿಸಲಾಗಿದೆ.
ಕಣಾಟಕ ಬ್ಯಾಂಕ್‌ನ ವ್ಯಾಪಕ ಶಾಖಾ ಜಾಲದ ಮೂಲಕ ಗ್ರಾಹಕರು ಹುಡ್ಕೊ ಕ್ಯಾಪಿಟಲ್ ಗೇನ್ ಬಾಂಡ್‌ಗಳಿಗೆ ಚಂದಾದಾರರಾಗಬಹುದು. ಹೂಡಿಕೆದಾರರಿಗೆ ಅಗತ್ಯ ಮಾಹಿತಿ, ಮಾರ್ಗದರ್ಶನ ಹಾಗೂ ಗ್ರಾಹಕ ಸೇವೆಯನ್ನು ಬ್ಯಾಂಕ್ ಒದಗಿಸಲಿದೆ.

ಬ್ಯಾಂಕ್‌ನ ಹೂಡಿಕೆ ಉತ್ಪನ್ನಗಳ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಸೇರ್ಪಡೆ ಮಹತ್ವದ ಹೆಜ್ಜೆಯಾಗಿದ್ದು, ಚಿಲ್ಲರೆ ಮತ್ತು ಸಾಂಸ್ಥಿಕ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಹೊಸ ಹಣಕಾಸು ಉತ್ಪನ್ನಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
ಬಾಂಡ್‌ಗಳ ಅರ್ಹತೆ, ಹೂಡಿಕೆ ಮಿತಿ, ಚಂದಾದಾರಿಕೆ ಪ್ರಕ್ರಿಯೆ ಹಾಗೂ ನಿಯಮ-ಷರತ್ತುಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಸಮೀಪದ ಕಣಾಟಕ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು ಎಂದು ಬ್ಯಾಂಕ್ ಪ್ರಕಟನೆ ತಿಳಿಸಿದೆ.

Banner Ad