ಸುದ್ಧಿಕನ್ನಡ ವಾರ್ತೆ
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಎಲ್ ಪಿಜಿ ಸಿಲಿಂಡರ್ ಪಡೆದಿರುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಸಬ್ಸಿಡಿಯನ್ನು ನೀಡುತ್ತಿದೆ. ಇದೇ ರೀತಿ ಜಮಾವಣೆಯಾಗಿರುವ ಹಣದ ಬಗ್ಗೆ ಚೆಕ್ ಮಾಡಲು ಬ್ಯಾಂಕಿಗೆ ಹೋದ ಮಹಿಳೆಯೋರ್ವರಿಗೆ ಅಚ್ಚರಿ ಕಾದಿತ್ತು. ಆ ಮಹಿಳೆಯ ಬ್ಯಾಂಕ್ ಖಾತೆಗೆ 99,99,99,997 ರೂ ಜಮಾವಣೆಯಾಗಿತ್ತು.

 

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಸಿಲಿಂಡರ್ ಸಂಪರ್ಕ ಪಡೆದ ಅರ್ಹ ಫಲಾನುಭವಿಗಳಿಗೆ ಈ ಸಬ್ಸಿಡಿ ಹಣ ನೀಡಲಾಗುತ್ತದೆ. ಸಿಲಿಂಡರ್ ಪಡೆಯುವಾಗ ಸಂಪೂರ್ಣ ಹಣ ನೀಡಿ , ನಂತರ ಸರ್ಕಾರವು ನಿಗಧಿ ಪಡಿಸಿರುವ ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತದೆ. ಆದರೆ ಈ ಮಹಿಳೆಯೋರ್ವರ ಬ್ಯಾಂಕ್ ಖಾತೆಗೆ 99 ಕೋಟಿ ರೂ ಜಮಾವಣೆಯಾದ ಆಶ್ಚರ್ಯಕರ ಘಟನೆ ನಡೆದಿದೆ.

 

ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯ 36 ವರ್ಷದ ಕಾಶ್ಮಿಕಾ ಎಂಬ ಮಹಿಳೆಗೆ 99 ಕೋಟಿ ಹಣ ಜಮಾ ಆಗಿದೆ. ಈ ಬೃಹತ್ ಮೊತ್ತದ ಹಣ ಜಮಾ ಆಗಿರುವುದನ್ನು ಕಂಡ ಬ್ಯಾಂಕ್ ಸಿಬ್ಬಂಧಿ ತನಿಖೆ ಮುಗಿರುವ ವರೆಗೂ ಕಾಶ್ಮಿಕಾ ರವರ ಬ್ಯಾಂಕ್ ಖಾತೆಯನ್ನು ತಡೆಹಿಡಿದಿದ್ದಾರೆ. ಇದರಿಂದಾಗಿ ಬಡ ಕುಟುಂಬದ ಈ ಮಹಿಳೆಗೆ ತುರ್ತು ಅಗತ್ಯವಿರುವ ತಮ್ಮ ಖಾತೆಯಲ್ಲಿರುವ ತಮ್ಮ ಹಣವನ್ನೂ ಡ್ರಾ ಮಾಡಲು ಆಗದೆಯೇ ತೊಂದರೆಗೆ ಸಿಲುಕಿದ್ದಾರೆ ಎನ್ನಲಾಗಿದೆ.

ತಾಂತ್ರಿಕ ದೋಷದಿಂದ ಅಥವಾ ಸರ್ವರ್ ಸಮಸ್ಯೆಯಿಂದಾಗಿ ಇಷ್ಟೊಂದು ದೊಡ್ಡ ಮೊತ್ತದ ಹಣ ಜಮಾವಣೆಯಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.