ಸುದ್ಧಿಕನ್ನಡ ವಾರ್ತೆ
ಪಣಜಿ: ಖಾನಾಪುರ ಬೆಳಗಾವಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಖಾನಾಪುರ-ಹೇಮಡಗಾ ಹೆದ್ದಾರಿಯಲ್ಲಿರುವ ಹಲತಾರ ಹೊಳೆಯಲ್ಲಿ ನೀರಿನ ಹರಿವು ಭಾರಿ ಹೆಚ್ಚಳವಾಗಿ ಗೋವಾ ಹೆದ್ದಾರಿ ಬಂದ್ ಮಾಡಲಾಗಿದೆ.
ಗೋವಾ-ಖಾನಾಪುರ-ಬೆಳಗಾವಿ ಮಾರ್ಗದ ವಾಹನ ಸಂಚಾರವನ್ನು ಭಾನುವಾರ ರಾತ್ರಿಯಿಂದಲೇ ರಾಮನಗರದ ಮೂಲಕ ತಿರುಗಿಸಲಾಗಿದೆ. ವಾಹನ ಸವಾರರು ಈ ಪರ್ಯಾಯ ಮಾರ್ಗವನ್ನು ಬಳಸುವಂರೆಯೂ ಅಧಿಕಾರಿಗಳು ಸೂಚಿಸಿದ್ದಾರೆ.
ಖಾನಾಪುರ-ಬೆಳಗಾವಿ ಭಾಗದಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಹಲತಾರ್ ಹೊಳೆ ಉಕ್ಕಿ ಹರಿಯುತ್ತಿದ್ದು, ನೀರು ಸೇತುವೆ ಮೇಲೆ ನೀರು ಹರಿಯುತ್ತಿದ್ದು ಈ ಹೆದ್ದಾರಿ ಮಾರ್ಗ ಬಂದ್ ಆಗಿದೆ. ಮಳೆ ಮುಂದುವರೆದಿದ್ದು ಇನ್ನಷ್ಟು ಆತಂಕ ಹೆಚ್ಚಿದೆ.
