ಸುದ್ದಿ ಕನ್ನಡ ವಾರ್ತೆ

ತೀರ್ಥಹಳ್ಳಿ : ಹಿರಿಯ ಯಕ್ಷಗಾನ ಕಲಾವಿದ ಕೊಕ್ಕೋಡ್ತಿ ಕೃಷ್ಣಮೂರ್ತಿ ಆಚಾರ್ಯ ( 82 ವರ್ಷ ) ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ..

ಇವರು ಪ್ರಸಿದ್ಧ ಯಕ್ಷಗಾನ ಕಲಾವಿದರಾಗಿ ಸುಮಾರು 50 ವರ್ಷಗಳಿಂದ ಸುಧೀರ್ಘ ಸೇವೆ ಸಲ್ಲಿಸಿರುತ್ತಾರೆ… ನಾಡಿನ ಪ್ರಸಿದ್ಧ ಬಯಲಾಟ ಮೇಳಗಳಾದ ಶ್ರೀ ಕ್ಷೇತ್ರ ಮಂದಾರ್ತಿ, ಮಾರಣಕಟ್ಟೆ, ಶಿವರಾಜಪುರ ಮೇಳ, ಶ್ರೀ ಕ್ಷೇತ್ರ ಸೋಮವಾರ ಸಂತೆ ಮೇಳ, ಗೋಳಿಗರಡಿ, ಮಡಮಕ್ಕಿ, ಅಮೃತೇಶ್ವರಿ, ನೀಲಾವರ, ಮೇಗರವಳ್ಳಿ, ಸೀತೂರು, ಹೊಸಳ್ಳಿ, ಸೇರಿದಂತೆ ಅನೇಕ ಮೇಳಗಳಲ್ಲಿ ಕಲಾವಿದರಾಗಿ ಪ್ರೇಕ್ಷಕರನ್ನ ಮನೆಗೆದ್ದು ಸೇವೆ ಸಲ್ಲಿಸಿದ್ದರು..

 

ಯಕ್ಷಗಾನ ಕ್ಷೇತ್ರದ ಸೇವೆಯನ್ನ ಪರಿಗಣಿಸಿ ಇವರಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಉಡುಪಿಯ ಯಕ್ಷಗಾನ ಕಲಾ ರಂಗ ಪ್ರಶಸ್ತಿ ಸೇರಿ ಅನೇಕ ಸನ್ಮಾನಗಳು ದೊರಕಿದೆ..