ಸುದ್ಧಿಕನ್ನಡ ವಾರ್ತೆ
ಪಣಜಿ: ಮದುವೆಯಾಗುತ್ತೇನೆಂದು ನಂಬಿಸಿ ಯುವತಿಯ ಮೇಲೆ ಪದೆ ಪದೆ ಲೈಂಗಿಕ ದೌರ್ಜನ್ಯ ವೆಸಗಿ, ಆಕೆಯ ಖಾಸಗಿ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಳ್ಲಿ ಪೋಸ್ಟ ಮಾಡುವುದಾಗಿ ಬೆದರಿಕೆ ಹಾಕಿದ್ದ ಕರ್ನಾಟಕದ ಬಳ್ಳಾರಿಯ ಆರೋಪಿಯನ್ನು ಗೋವಾದ ಪರ್ವರಿ ಪೋಲಿಸರು ಬಂಧಿಸಿದ್ದಾರೆ.

ಕರ್ನಾಟಕದ ಬಳ್ಳಾರಿಯ ನಿವಾಸಿ ರವಿತೇಜ(25) ಬಂಧಿತ ಆರೋಪಿಯಾಗಿದ್ದಾನೆ. ಸಂತ್ರಸ್ತೆ ಪರ್ವರಿ ಪೋಲಿಸ್ ಠಾಣೆಯಲ್ಲಿ ನೀಡಿರುವ ದೂರಿನ ಪ್ರಕಾರ- ಆರೋಪಿಯು ಆಕೆಯ ಸ್ನೇಹ ಬೆಳೆಸಿಕೊಂಡು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ನಂತರ ಮದುವೆಯ ನೆಪದಲ್ಲಿ ಆಕೆಯ ಜೊತೆ ಲೈಂಗಿಕ ಸಂಬಂಧ ಹೊಂದಿದ್ದಾನೆ. ಇಷ್ಟೇ ಅಲ್ಲದೆಯೇ ಆಕೆಗೆ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆಯು ದೂರಿದ್ದಾಳೆ.

ನಂತರ ಆರೋಪಿಯು ಮದುವೆಯಾಗಲು ನಿರಾಕರಿಸಿದ್ದಾನೆ. ಸಂತ್ರಸ್ತೆಯ ಖಾಸಗಿ ಪೋಟೊಗಳನ್ನು ಸಾಮಾಜಿಕ ಜಾಕತಾಣಗಳಲ್ಲಿ ಪೋಸ್ಟ ಮಾಡಲು ಪ್ರಾರಂಭಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪರ್ವರಿಯ ಪೋಲಿಸ್ ಠಾಣೆಯಲ್ಲಿ ಸಂತ್ರಸ್ತೆ ನೀಡಿರುವ ದೂರನ್ನಾಧರಿಸಿ ಪೋಲಿಸರು ಹೈದರಾಬಾದ್ ಮತ್ತು ಬಳ್ಳಾರಿಗೆ ತೆರಳಿ ಆರೋಪಿಗಾಗಿ ಶೋಧ ಕಾರ್ಯ ನಡೆಸಿ ಅಗಷ್ಟ 2 ರಂದು ರಾತ್ರಿ ಪೋಲಿಸರು ಗೋವಾಕ್ಕೆ ಕರೆತಂದಿದ್ದಾರೆ.

ಬಂಧಿತ ಆರೋಪಿಯ ವಿರುದ್ಧ ಭಾರತೀಯ ದಂಡಸಂಹಿತೆ ಐಪಿಸಿ ಸೆಕ್ಷನ್ 2023 ರ 69, 123, ಮತ್ತು 351(3) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ ಐ ವಿರಾಜ್ ಸಾವಂತ್, ಪೋಲಿಸ್ ಕಾನ್ ಸ್ಟೇಬಲ್ ಆಕಾಶ ನಾವೆಲ್ಕರ್, ರವರ ತಂಡ ಪರ್ವರಿಯ ಪರ್ವರಿಯ ಪೋಲಿಸ್ ಇನ್ಸಪೆಕ್ಟರ್ ತುಕಾರಾಂ ಚೌಹಾಣ್ ಮಾರ್ಗದರ್ಶನದಲ್ಲಿ ಎಸ್ ಡಿಪಿಒ ವಿಶ್ವೇಶ ಕರ್ಪೆ ರವರ ಮೇಲ್ವಿಚಾರಣೆಯಲ್ಲಿ ಈ ಪ್ರಕರಣದ ಹೆಚ್ಚಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.