ಸುದ್ದಿ ಕನ್ನಡ ವಾರ್ತೆ
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಜಿಲ್ಲೆಯ ಎಡಕುಮರಿ ಬಳಿ ರೈಲ್ವೆ ಹಳಿಯ ಮೇಲೆ ಭಾರಿ ಪ್ರಮಾಣದ ಗುಡ್ಡ ಕುಸಿತ ಉಂಟಾಗಿ ಬೆಂಗಳೂರು ಮಂಗಳೂರು ರೈಲ್ವೆ ಮಾರ್ಗ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ರೈಲ್ವೆ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹಳಿಯ ಮೇಲೆ ಬಿದ್ದಿರುವ ಭಾರಿ ಪ್ರಮಾಣದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಆದರೆ ಈ ಮಾರ್ಗದಲ್ಲಿ ಓಡಾಡಬೇಕಿದ್ದ ರೈಲುಗಳು ದಿಢೀರ್ ರದ್ದುಗೊಂಡಿರುವುದರಿಂದ ಪ್ರಯಾಣಕರು ಪರದಾಡುವಂತೆ ಆಗಿದೆ.

 

ಬೆಂಗಳೂರು ಮುರುಡೇಶ್ವರ, ಬೆಂಗಳೂರು ಕೋಜಿ ಕೋಡ್, ವಿಜಯಪುರ ಮಂಗಳೂರು ಈ ರೈಲುಗಳನ್ನು ಹಾಸನದಲ್ಲಿ ನಿಲುಗಡೆ ಮಾಡಲಾಗಿದೆ. ಬೆಂಗಳೂರು ಕಾರವಾರ ಎಕ್ಸ್ಪ್ರೆಸ್ ರೈಲನ್ನು ಸಕಲೇಶಪುರದಲ್ಲಿ, ಮುರುಡೇಶ್ವರ ಬೆಂಗಳೂರು , ಮಂಗಳೂರು ವಿಜಯಪುರ ರೈಲುಗಳನ್ನು ಸುಬ್ರಹ್ಮಣ್ಯದಲ್ಲಿ ನಿಲುಗಡೆ ಮಾಡಲಾಗಿದೆ.

ವಿವಿಧ ಭಾಗದಿಂದ ಕಾನ್ಸ್ಟೇಬಲ್ ಹುದ್ದೆಯ ಪರೀಕ್ಷೆಗೆ ಬೆರಳ ಬೇಕಿದ್ದ ಪ್ರಯಾಣಿಕರು ರೈಲು ರದ್ದುಗೊಂಡಿದ್ದರಿಂದ ಪರದಾಡುವಂತಾಗಿದೆ.