ಸುದ್ಧಿಕನ್ನಡ ವಾರ್ತೆ
ಪಣಜಿ: ಉತ್ತರಗೋವಾದ ಸಿಕೇರಿಯ ಅಗ್ವಾದ್ ಕೋಟೆ ಬಳಿ ಶುಕ್ರವಾರ ಬೆಳಿಗ್ಗೆ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮಗುಚಿ ಬಿದ್ದಿದ್ದು, ಭಾರಿ ಆತಂಕ ಸೃಷ್ಟಿಯಾಗಿತ್ತು. ಬೋಟ್ ನಲ್ಲಿ ಒಟ್ಟು ಐದು ಜನರಿದ್ದರು. ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಪೆÇಲೀಸರ ತ್ವರಿತ ಕ್ರಮದಿಂದಾಗಿ ಸಂಭವನೀಯ ಅಪಘಾತ ತಪ್ಪಿದ್ದು, ಎಲಲ್ಲ ಮೀನುಗಾರರನ್ನು ರಕ್ಷಿಸಲಾಗಿದೆ.

 

ಬೋಟ್ ಮಗುಚಿದ ನಂತರ, ಅವರಲ್ಲಿ ಇಬ್ಬರು ಮುನ್ನೆಚ್ಚರಿಕೆ ವಹಿಸುತ್ತಾ ಅಗ್ವಾದ್ ಕೋಟೆ ತೀರಕ್ಕೆ ಈಜಿದರು. ಉಳಿದ ಮೂವರು ಸಮುದ್ರದಲ್ಲಿ ಸಿಲುಕಿಕೊಂಡರು. ಕರಾವಳಿ ಪೆÇಲೀಸರು ಮತ್ತು ಸ್ಥಳೀಯ ಮೀನುಗಾರರು ತಕ್ಷಣ ಶೋಧ ಕಾರ್ಯಾಚರಣೆಯನ್ನು ನಡೆಸಿ ರೇಯಿಸ್ ಮಾಗೋಸ್‍ನಲ್ಲಿ ಅವರನ್ನು ಸುರಕ್ಷಿತವಾಗಿ ರಕ್ಷಿಸಿದರು.

 

ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಐದು ಜನ ಮೀನುಗಾರರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆಯು ಸ್ವಲ್ಪ ಸಮಯದವರೆಗೆ ಪ್ರದೇಶದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿತ್ತು. ಕರಾವಳಿ ಪೆÇಲೀಸರು ಮತ್ತು ಸ್ಥಳೀಯ ಮೀನುಗಾರರ ತ್ವರಿತ ಕ್ರಮದಿಂದಾಗಿ ಸಂಭವನೀಯ ದೊಡ್ಡ ಅಪಘಾತ ತಪ್ಪಿತು.