ಸುದ್ದಿ ಕನ್ನಡ ವಾರ್ತೆ
ಗೋವಾ: ಕ್ಯಾಂಡೋಲಿಂ ಪ್ರದೇಶದಲ್ಲಿ ಬುಧವಾರ ಮುಂಜಾನೆ 108 ಜಿವಿಕೆ ಇಎಂಆರ್‌ಐ (GVK EMRI) ತುರ್ತು ವೈದ್ಯಕೀಯ ಸೇವೆಯ ಆಂಬುಲೆನ್ಸ್ ರಸ್ತೆ ಬದಿಯ ಮರಕ್ಕೆ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಭಾರೀ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಆಂಬುಲೆನ್ಸ್‌ನ ಮುಂಭಾಗ ಸಂಪೂರ್ಣ ಜಜ್ಜುಗೊಂಡಿದ್ದು, ಗಾಜು ಪುಡಿಯಾಗಿ ಚಾಲಕನ ಕ್ಯಾಬಿನ್ ನುಜ್ಜುಗುಜ್ಜಾಗಿದೆ. ಈ ದುರ್ಘಟನೆಯಲ್ಲಿ ಚಾಲಕ ಹಾಗೂ ಕರ್ತವ್ಯದಲ್ಲಿದ್ದ ನರ್ಸ್ ತಲೆಗೆ ಗಾಯಗಳಾಗಿದ್ದು, ಇಬ್ಬರನ್ನೂ ತಕ್ಷಣ ಬಾಂಬೋಲಿಂನ ಗೋವಾ ಮೆಡಿಕಲ್ ಕಾಲೇಜು (GMC) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
