ಸುದ್ದಿ ಕನ್ನಡ ವಾರ್ತೆ
ಜೊಯಿಡಾ :ರಾಜ್ಯದಾದ್ಯಂತ ಮತದಾರರ ವಿಶೇಷ ಮತ್ತು ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು ತಾಲೂಕಿನಲ್ಲಿ ಯು ಉತ್ತಮವಾಗಿ ನಡೆಯುತ್ತಿದೆ.ಈ ಕಾರ್ಯ ವನ್ನು ಎಲ್ಲರಿಗಿಂತ ಮೊದಲೇ ನಿರ್ವಹಿಸಿದ ಉಳವಿ ಗ್ರಾಮ ಆಡಳಿತ ಅಧಿಕಾರಿ ಪರಶುರಾಮ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜೊಯಿಡಾ ತಾಲೂಕು ಹಳಿಯಾಳ ವಿಧಾನ ಸಭಾ ಕ್ಷೇತ್ರಕ್ಕೆ ಬರುತ್ತಿದ್ದು 16 ಗ್ರಾಮ ಪಂಚಾಯತ ಗಳನ್ನು ಹೊಂದಿದೆ.
ಉಳವಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಈ ಬಾರಿ ಮತದಾರರ ಪರಿಷ್ಕರಣೆಯಲ್ಲಿ ತಾಲೂಕಿನಲ್ಲಿಯೇ ಮೊದಲ ಸ್ಥಾನದಲ್ಲಿದೆ. ಅದಕ್ಕಾಗಿ ಉಳವಿ ಗ್ರಾಮ ಆಡಳಿತ ಅಧಿಕಾರಿ ಪರಶುರಾಮ ಜೋರಗಸ್ತಿ ಅವರನ್ನು ಪ್ರಶಂಸನಾ ಪತ್ರದೊಂದಿಗೆ ಇಂದು ಜೊಯಿಡಾ ದಲ್ಲಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ತಾಲೂಕಿನ ತಹಶೀಲ್ದಾರ ಮಂಜುನಾಥ ಮನ್ನೊಳ್ಳಿ ಅವರು ಗ್ರಾಮ ಆಡಳಿತ ಅಧಿಕಾರಿ ಪರಶುರಾಮ ಅವರನ್ನು ಇಂದು ಪ್ರಶಂಸನಾ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಅವರ ಕರ್ತವ್ಯನಿಷ್ಠೆ , ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವ ಮುಂದಿನ ದಿನಗಳಲ್ಲಿ ಮುಂದುವರೆಯಲಿ ಮತ್ತು ಎಲ್ಲರಿಗೂ ಮಾದರಿ ಆಗಲಿ ಎಂದು ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ ಈ ಸಂದರ್ಭದಲ್ಲಿ ಹಾರೈಸಿದರು.

