ಸುದ್ಧಿಕನ್ನಡ ವಾರ್ತೆ
ಓಡಿಶಾದಲ್ಲಿ ಡಾನಾ ಚಂಡಮಾರುತ ಅಪ್ಪಳಿಸಿದೆ. ಈ ಚಂಡಮಾರುತವು ಮುಂಜಾನೆ 3.30 ರಿಂದ ಭಿತರ್ಕಾದಿಂದ ಉತ್ತರ ಈಶಾನ್ಯಕ್ಕೆ 20 ಕಿ.ಮಿ ದೂರದಲ್ಲಿ ಕೇಂದ್ರೀಕೃತವಾಗಿದೆ. ಈ ಚಂಡಮಾರುತ ಗಾಳಿ ವೇಗವು ಭೂಮಿಯ ಮೇಲೆ 120 ಕಿಮಿ ತಲುಪುವ ನಿರೀಕ್ಷೆಯಿದೆ.
ಪ್ರತಿ ಗಂಟೆಗೆ 120 ಕಿಮಿ ವೇಗದಲ್ಲಿ ಗಾಳಿ ಬೀಸುವ ಮೂರು ಜಿಲ್ಲೆಗಳ ಮೇಲೆ ಡಾನಾ ಚಂಡಮಾರುತ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈಗಾಗಲೇ 5.84 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಮೋಹನ್ ಚರಣ್ ರವರೊಂದಿಗೆ ಈ ಕುರಿತು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಚಂಡಮಾರುತವನ್ನು ಎದುರಿಸಲು ರಾಜ್ಯವು ಸಜ್ಜಾಗಿದೆ ಎಂದು ಅವರು ಪ್ರಧಾನಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.