ಸುದ್ದಿ ಕನ್ನಡ ವಾರ್ತೆ
ಮುಂಡಗೋಡ:ತಾಲೂಕಾ ಘಟಕದಿಂದ ಮುಂಡಗೋಡ ಪಣಜಿ ನೂತನ ಬಸ್ ಸೇವೆಯನ್ನು ಕಾರ್ಯರಂಭಿಸಲಾಗಿದೆ.
ಮುಂಡಗೋಡ ಪಣಜಿ ಬಸ್ಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಸದಸ್ಯ ಧರ್ಮರಾಜ ನಡಿಗೇರ, ಡಿಪೋ ಮ್ಯಾನೇಜರ್ ಕುರ್ತಕೋಟಿ, ಚಾಲಕರು, ನಿರ್ವಾಹಕರು,ಸಾರ್ವಜನಿಕರು ಉಪಸ್ಥಿತರಿದ್ದರು.
ಈ ನೂತನ ಬಸ್ ಬೆಳಿಗ್ಗೆ 8.15ಕ್ಕೆ ಮುಂಡಗೋಡನಿಂದ ಹೊರಟು ಬಂಕಾಪುರ ಹಾನಗಲ್, ಶಿರಸಿ, ಅಂಕೋಲಾ, ಕಾರವಾರ ಮಾರ್ಗವಾಗಿ ಪಣಜಿಗೆ ತಲುಪಲಿದೆ.
ಮುಂಡಗೋಡ-ಪಣಜಿ ನೂತನ ಬಸ್ ಸೇವೆ ಆರಂಭ
