Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ(ಮಾಪ್ಸಾ): ಗೋವಾದ ಮಾಪ್ಸಾದ ಶ್ರೀ ಗಣೇಶ ಮಂಡಳ ಪರ್ರಾ ಟ್ರಸ್ಟ ವತಿಯಿಂದ ಮಾಪ್ಸಾದ ಪರ್ರಾದಲ್ಲಿರುವ ಶ್ರೀ ವರದ ಸಿದ್ಧಿವಿನಾಯಕ ದೇವಸ್ಥಾನದ 20 ನೇಯ ವರ್ಧಂತಿ ಉತ್ಸವವನ್ನು ಏಪ್ರಿಲ್ 5 ರಂದು ಭಾನುವಾರ ವಿವಿಧ ಧಾಮಿಕ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ದೇವಸ್ಥಾನದ ಪ್ರಧಾನ ಅರ್ಚಕರಾದ ಗಣೇಶ ಹೆಗಡೆ ರವರ ನೇತೃತ್ವದಲ್ಲಿ ಸಂಜೀವ ಉತ್ತಮ ತಳಕರ ರವರ ಯಜಮಾನತ್ವದಲ್ಲಿ ಮಹಾಗಣಪತಿ ಪೂಜನ, ಪುಣ್ಯಾಹವಾಚನ, ಕುಲದೇವತಾ ಪ್ರಾರ್ಥನೆ, ಆಚಾರ್ಯ ವರ್ಣನೆ, ಕಲಶ ಸ್ಥಾಪನೆ, ದೇವತಾ ಆಹ್ವಾಹನ, ಅರ್ಥರ್ವಶೀರ್ಷ ಆವರ್ತನೆ, ಅಥರ್ವಶೀರ್ಷ ಮೂಲಮಂತ್ರ ಹವನ, ಪೂರ್ಣಾಹುತಿ, ಮಹಾ ಮಂಗಳಾರತಿ ಸೇವೆ ಸಲ್ಲಿಸಿ ಮಹಾಪ್ರಸಾದ ವಿತರಣೆ ಮಾಡಲಾಯಿತು.

Banner Ad

ದೇವಸ್ಥಾನದ ವರ್ಧಂತಿ ಉತ್ಸವದ ಹಿನ್ನೆಲೆಯಲ್ಲಿ ದೊಡ್ಡ ಗಣಪನ ದರ್ಶನ ಪಡೆಯಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

Banner Ad