ಸುದ್ದಿ ಕನ್ನಡ ವಾರ್ತೆ
​ನವದೆಹಲಿ: ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಮತ್ತು ಕಲಾ ನಿಧಿ ವಿಭಾಗ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ಭೋಪಾಲ್ ಇವರ ಸಹಯೋಗದಲ್ಲಿ ದೆಹಲಿಯ ಜನಪಥ್ ನಗರದ ಸೇವೆಂಟ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿರಸಿಯ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಕಾಡುಹಕ್ಕಿ ನೃತ್ಯ ಬಳಗವು ಸಿದ್ಧಿ ಜನಾಂಗದ ಡಮಾಮಿ ನೃತ್ಯದ ಪ್ರದರ್ಶನ ನೀಡಿತು.

​ತಂಡದ ಪನ್ನಿಕಾ ಸಿದ್ಧಿ, ಸಂಜಯ್ ಸಿದ್ಧಿ, ದಿವ್ಯಾ ಸಿದ್ಧಿ, ಶಿಲ್ಪಾ ಸಿದ್ಧಿ, ಸುಪ್ರಿಯಾ ಸಿದ್ಧಿ, ಸೌಜನ್ಯ ಸಿದ್ಧಿ, ಚಲನಾ ಸಿದ್ಧಿ, ವಿನಿತಾ ಸಿದ್ಧಿ, ಐಶ್ವರ್ಯ ಸಿದ್ಧಿ, ಸುರೇಶ ಸಿದ್ಧಿ, ಒಳಗೊಂಡ ತಂಡ ಸಿದ್ಧಿ ಜನಾಂಗದ ಡಮಾಮಿ ನೃತ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಿ ಜನರ ಮೆಚ್ಚುಗೆಗೆ ಪಾತ್ರವಾಯಿತು.
​ಇವರ ಈ ಸಾಧನೆಗೆ ಎಂ.ಇ.ಎಸ್ ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಕಾಲೇಜು ಉಪಸಮಿತಿಯ ಅಧ್ಯಕ್ಷ ಎಸ್.ಕೆ. ಭಾಗವತ್, ಪ್ರಾಚಾರ್ಯ ಜಿ.ಟಿ ಭಟ್ ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.