ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ಹೆಲ್ಮೆಟ್ ಧರಿಸದೆಯೇ ಬೈಕ್ ಓಡಿಸಿದರೆ ನಿಮ್ಮ ಲೈಸನ್ಸ ರದ್ದು…. ಹೌದು ಗೋವಾದಲ್ಲಿ ಟ್ರಾಫಿಕ್ ಪೋಲಿಸರು ಇಂತಹ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಪೋಲಿಸರು ಶುಕ್ರವಾರ 250 ಜನರ ಲೈಸನ್ಸ ರದ್ದುಗೊಳಿಸಿದ್ದಾರೆ. (If you ride a bike without wearing a helmet in Goa, your license will be cancelled).

ಗೋವಾದಲ್ಲಿ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಠಿಯಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೋಲಿಸರು ಮುಂದಾಗಿದ್ದಾರೆ.

ಗೋವಾ ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಗೋವಾಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಬಹುತೇಕ ಪ್ರವಾಸಿಗರು ರೆಂಟ್ ಬೈಕ್ ಪಡೆದು ಹೆಲ್ಮೆಟ್ ಧರಿಸದೆಯೇ ಬೈಕ್ ಓಡಿಸುತ್ತಾರೆ. ಇದೀಗ ಹೀಗೆ ನಿಯಮ ಉಲ್ಲಂಘಿಸಿದರೆ ಲೈಸನ್ಸ ರದ್ದಾಗಿ ತೊಂದರೆ ಅನುಭವಿಸುವಂತಾಗಲಿದೆ.