ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಕಮರ್ಶಿಯಲ್ ಸಿಲಿಂಡರ್ ಕೊರತೆಯ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳನ್ನು ಮುಂದೂಡುವ ಪರಿಸ್ಥಿತಿ ಬಂದೊದಗಿದೆ. ಗೋವಾದ ಪೊಂಡಾದಲಲ್ಲಿ ಈಗಾಗಲೇ ನಿಗಧಿಯಾಗಿದ್ದ ವಿವಾಹ ಸಮಾರಂಭಕ್ಕೆ ಕ್ಯಾಟ್ರಿಂಗ್ ನವರು ಗ್ಯಾಸ್ ಸಿಲಿಂಡರ್ ಕೊರತೆಯ ಹಿನ್ನೆಲೆಯಲ್ಲಿ ಆರ್ಡರ್ ತೆಗೆದುಕೊಳ್ಳದ ಕಾರಣ ವಧು-ವರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗೋವಾದಲ್ಲಿ ಸದ್ಯ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಪೂರೈಕೆ ಇದ್ದರೂ ಕೂಡ ಕಮರ್ಶಿಯಲ್ ಸಿಲಿಂಡರ್ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕ್ಯಾಟ್ರಿಂಗ್ ನವರು ಹೊಸದಾಗಿ ವಿವಾಹ ಸಮಾರಮಭದ ಆರ್ಡರ್ ಬುಕಿಂಗ್ ಮಾಡಿಕೊಳ್ಳುತ್ತಿಲ್ಲ. ಇದರಿಂದಾಗಿ ಕೆಲ ವಿವಾಹ ಸಮಾರಂಭವನ್ನೇ ಮುಂದೂಡುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮದುವೆಗಾಗಿ ಬುಕ್ ಮಾಡಿದ್ದ ಕಲ್ಯಾಣಮಂಟಪ ರದ್ದು ಮಾಡುತ್ತಿರುವುದು ಕೂಡ ಬೆಳಕಿಗೆ ಬಂದಿದೆ.

ಸದ್ಯ ಗೋವಾದಲ್ಲಿ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಿ ಕೆಲ ದಿನಗಳಾದರೂ ಬಾರದ ಹಿನ್ನೆಲೆಯಲ್ಲಿ ಗ್ರಾಹಕರು ಗ್ಯಾಸ್ ಏಜನ್ಸಿಗಳ ಎದುರು ಸಿಲಿಂಡರ್ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯ ಕಂಡುಬರುತ್ತಿದೆ.
ಮಧ್ಯಪ್ರಾಚ್ಯ ದಲ್ಲಿ ನಡೆಯುತ್ತಿರುವ ಯುದ್ಧವು ಇದೀಗ ಭಾರತದಲ್ಲಿ ಅಡುಗೆ ಮನೆಯವರೆಗೆ ಮಾತ್ರವಲ್ಲದೆಯೇ ಮದುವೆ ಸಮಾರಂಭಗಳಿಗೂ ಬಿಸಿ ತಟ್ಟುವಂತಾಗಿದೆ.