ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಶ್ರೀ ಗ್ರಾಮದೇವಿ ಪುನಃ ಪ್ರತಿಷ್ಠಾನಾ ಸಂದರ್ಭದಲ್ಲಿ ಶಾಲಿವಾಹನ ಶಕ 1949ರ ಪರಾಭವ ಸಂವತ್ಸರದ ಭಾರತಿ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.

ದೇವಸ್ಥಾನದ ಮುಖ್ಯ ಅರ್ಚಕರಾದ ಪರಶುರಾಮ ಆಚಾರಿಯವರು ದಿನದರ್ಶಿಕೆಯನ್ನು ದೇವಿಯರ ಸನ್ನಿಧಾನದಲ್ಲಿಟ್ಟು ಪೂಜಿಸಿ ದಿನದರ್ಶಿಕೆಗೆ ಒಳ್ಳೆಯದಾಗಲಿ ಎಂಬ ಹಾರೈಕೆಯೊಂದಿಗೆ ಬಿಡುಗಡೆ ಮಾಡಿದರು. ದಿನದರ್ಶಿಕೆ ತಯಾರಕರಾದ ಗಣೇಶ ಬಂಟ, ಬಿಕ್ಕು ಗುಡಿಗಾರ ಕಲಾ ಕೇಂದ್ರದ ಸಂತೋಷ ಗುಡಿಗಾರ, ಆದಿತ್ಯ ಗುಡಿಗಾರ, ಗಣೇಶ ಪಂಡರಪುರ, ಅರ್ಚಕರಾದ ಗಣಪತಿ ಆಚಾರಿ ಹಾಜರಿದ್ದರು. ದಿನದರ್ಶಿಕೆ ಇಲ್ಲಿಯವರೆಗೆ 10 ವರ್ಷಗಳ ಮುದ್ರಣವಾಗಿದೆ.