Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕಲಂಗುಟ್‍ನ ತಿವೈವಾಡಾದಲ್ಲಿರುವ ‘ಸ್ಪ್ರಿಂಗ್ ಬೀಚ್ ಕಾಟೇಜ್ ರೆಸಾರ್ಟ್’ ನಲ್ಲಿ ಬುಧವಾರ ಬೆಳಿಗ್ಗೆ 5.30 ರ ಸುಮಾರು ಭಾರಿ ಬೆಂಕಿ ಅವಘಡ ಸಂಭವಿಸಿದೆ. ಎಂಟು ಕಾಟೇಜ್‍ಗಳಲ್ಲಿ ಮೂರು ಕಾಟೇಜ್ ಗಳು ಸುಟ್ಟು ಭಸ್ಮವಾಗಿವೆ. ಐದು ಕಾಟೇಜ್‍ಗಳನ್ನು ಬೆಂಕಿಯಿಂದ ರಕ್ಷಿಸುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ.

ಈ ಅಗ್ನಿ ಅವಗಢದ ಬಗ್ಗೆ ಮಾಹಿತಿ ಬಂದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬೆಂಕಿಯ ತೀವ್ರತೆಯನ್ನು ಪರಿಗಣಿಸಿ, ಮಾಪ್ಸಾ ಮತ್ತು ಪಿಲಾರ್‍ನಿಂದ ಅಗ್ನಿಶಾಮಕ ದಳವನ್ನು ಕರೆಸಲಾಯಿತು. ಅವರು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

Banner Ad

ಹೀಗಾಗಿ, ಐದು ಕಾಟೇಜ್‍ಗಳು ಮತ್ತು ಇತರ ಆಸ್ತಿಗಳನ್ನು ಬೆಂಕಿಯಿಂದ ರಕ್ಷಿಸಲು ಸಾಧ್ಯವಾಯಿತು. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಊಹಿಸಲಾಗುತ್ತಿದೆ. ‘ಸ್ಪ್ರಿಂಗ್ ಬೀಚ್ ಕಾಟೇಜ್ ರೆಸಾರ್ಟ್’ ಅಗಸ್ಟಿನ್ ಫನಾರ್ಂಡಿಸ್ ಅವರ ಒಡೆತನದಲ್ಲಿದೆ.

Banner Ad