ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ,ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಭಕ್ತಾಧಿಗಳ ಶೃದ್ಧಾ ಸ್ಥಾನವಾಗಿರುವ ಗೋವಾ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿರುವ ಡಿಗ್ಗಿ-ಮಾಯರೆ ಪರಿಸರದಲ್ಲಿರುವ ಶ್ರೀ ಗೌಳಾದೇವಿ ಜಾತ್ರೋತ್ಸವಕ್ಕೆ ಸೋಮವಾರ ಗೋವಾ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ್ದರು. ಆದರೆ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಜಾತ್ರೋತ್ಸಕ್ಕೆ ತೆರಳಿದ್ದರಿಂದ ಡಿಗ್ಗಿ-ಮಾಯರೆ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ವಾಹನ ದಟ್ಟಣೆಯುಂಟಾಗಿತ್ತು. ಕಿರಿದಾದ ಕಚ್ಚಾ ರಸ್ತೆಯಿಂದಾಗಿ ಗೋವಾದಿಂದ ತೆರಳುವ ಭಕ್ತಾದಿಗಳು ಕೇವಲ 18 ಕಿಮಿ ಪ್ರಯಾಣಕ್ಕೆ 6 ಗಂಟೆ ಹಿಡಿಯುವಂತಾಗಿ ತೆರಳಿದ್ದ ಭಕ್ತರು ಪರದಾಡುವಂತಾಯಿತು.
ಗೌಳಾದೇವಿ ಜಾತ್ರೋತ್ಸವಕ್ಕೆ ಗೋವಾ ರಾಜ್ಯ ಸಮಾಜಕಲ್ಯಾಣ ಮಂತ್ರಿ ಸುಭಾಷ ಫಳದೇಸಾಯಿ ರವರು ತೆರಳಿದ್ದರು. ಮಾರ್ಗಮದ್ಯೆ ಹಲವು ಸ್ಥಳಗಳಲ್ಲಿ ಅವರು ಕಾರಿನಿಂದ ತಾವೇ ಸ್ವತಃ ಕೆಳಕ್ಕಿಳಿದು ವಾಹನ ಸಂಚಾರ ಸುಗಮಗೊಳಿಸಲು ವಾಹನ ಸಂಚಾರ ಸುಗಮ ಗೊಳಿಸಲು ಪ್ರಯತ್ನಿಸಿದರು.
ಉಗೆ ಯಿಂದ ಜುನಾ ಈ 7 ಕಿಮಿ ರಸ್ತೆ ಗೋವಾ ರಾಜ್ಯದ ಸರಹದ್ದಿನಲ್ಲಿ ಬರುತ್ತದೆ. ಮುಂದಿನ ಭಾಗ ಕರ್ನಾಟಕದ ಸರಹದ್ದಿಗೆ ಬರುತ್ತದೆ. ಆದರೆ ಕರ್ನಾಟಕದ ರಸ್ತೆಗೆ ಹೋಲಿಸಿದರೆ ಗೋವಾದ ರಸ್ತೆಗಳು ಅತ್ಯುತ್ತಮವಾಗಿದೆ ಎಂದು ಹಲವು ಭಕ್ತಾದಿಗಳು ಮಾಹಿತಿ ನೀಡಿದ್ದಾರೆ. ಆದರೆ ಗೋವಾದ ಭಾಗದಲ್ಲಿ ರಸ್ತೆ ಕಿರಿದಾಗಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಹಲವು ಭಾಗದಲ್ಲಿ ರಸ್ತೆಯಲ್ಲಿ ಎರಡು ವಾಹನಗಳು ತೆರಳುವಷ್ಟು ಅಗಲವಿಲ್ಲದಿರುವುದು ಭಕ್ತರು ಹೆಚ್ಚು ತೊಂದರೆ ಅನುಭವಿಸುವಂತಾಯಿತು.
