ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ತಾಲೂಕಿನಲ್ಲಿ ಹೋಳಿ ಹಬ್ಬದ ಸಿಹಿ ನೆನಪಿನಲ್ಲಿ ಹೋಳಿ ಕುಣಿತ ಆರಂಭ ವಾಗಿದೆ.
ನಮ್ಮ ನಿಮ್ಮ ದೇವರೇ ನಮ್ಮ ಮೇಲೆ ಕರುಣೆ,ಎಂದು ಕೋಲು ಹಾಕುವುದು ನೋಡುವುದೇ ಅಂದ,ಕೊಂಕಣಿ ಮರಾಠಿ, ಕನ್ನಡ ಹೀಗೆ ಬೇರೆ ಬೇರೆ ತಂಡಗಳು ಮಧುರವಾಗಿ ಹಾಡು ಗಳನ್ನು ಹೇಳುತ್ತಾ. ಕೋಲಾಟ ಆಡುತ್ತ ಮನೆ ಮನೆಗೆ ಹೋಗುವದು ಕುಣಿಯುವದು ಮಾಡುತ್ತಾ ಹುಣ್ಣಿಮೆ ದಿನದ ವರೆಗೆ ಊರೂರು ಸುತ್ತಿ ಕುಣಿಯುತ್ತಾರೆ .
ನಂತರ ತಮ್ಮ ಪದ್ಧತಿಯಂತೆ ಮುಕ್ತಾಯ ಹಾಡುತ್ತಾರೆ. ಮುಂದಿನ ಪೀಳಿಗೆಗೆ ಈ ಸಂಪ್ರದಾಯ ಇರಲಿ ಎನ್ನುವ ಉದ್ದೇಶ ದಿಂದ ಕೋಲಾಟ ಆಡುತ್ತ ಇದ್ದರೂ ಯುವ ಪೀಳಿಗೆ ಯವರು ಕಡಿಮೆ ಇದ್ದು ಹಿರಿಯರೇ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಒಟ್ಟಾರೆ ಹೋಳಿ ಹಬ್ಬದ ಭರಾಟೆ ಜೋರಾಗಿದೆ.
