ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಅವುರ್ಲಿ ಶಾಲೆಯ ಮಕ್ಕಳಿಗೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸೋಮಣ್ಣಾ ಶ್ರೀಕೃಷ್ಣ ವೇಳಿಪ ಅವರು 24 ಸೆಟ್ 8.5 ” ಪರಿಸರ ಸ್ನೇಹಿ LCD Writing Tablet ನ್ನು ಕೊಡುಗೆಯಾಗಿ ನೀಡಿದ್ದಾರೆ. ಸರ್ಕಾರದ ಅನುದಾನ, ಸೌಲಭ್ಯಗಳ ಜೊತೆ ಸಮುದಾಯದ ಸಹಭಾಗಿತ್ವ ಇದ್ದಲ್ಲಿ ಶೈಕ್ಷಣಿಕ ಅಭಿವೃದ್ಧಿಯಾಗಲು ಸುಲಭವಾಗುತ್ತದೆ.ಈ ದಿಶೆಯಲ್ಲಿ ಅವುರ್ಲಿ ಗ್ರಾಮದ ಕೃಷಿಕರು, ಶಿಕ್ಷಣ ಪ್ರೇಮಿಗಳು,ಶಾಲೆಯ ಹಳೆಯ ವಿದ್ಯಾರ್ಥಿಗಳು ಆಗಿರುವ ಸೋಮಣ್ಣಾ ಶ್ರೀಕೃಷ್ಣ ವೇಳಿಪರವರು ಪರಿಸರ ಕಾಳಜಿ,ಮಕ್ಕಳಿಗೆ ಉಪಯುಕ್ತವಾಗಿರುವ,ತಮ್ಮ ದುಡಿಮೆಯ ಸ್ವಲ್ಪ ಭಾಗದಲ್ಲಿ Writing Tablet ಸೆಟ್ ನ್ನು ಕೊಡುಗೆಯನ್ನಾಗಿ ನೀಡಿದ್ದಾರೆ. ಶಾಲೆಯ ಪರವಾಗಿ ಶಾಲೆಯ ಮುಖ್ಯ ಶಿಕ್ಷಕರಾದ ಬಿರಪ್ಪ ಉರ್ಮಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸೋಮಣ್ಣಾ ಶ್ರೀಕೃಷ್ಣ ವೇಳಿಪ,ಶಾಲೆಯ ಅತಿಥಿ ಶಿಕ್ಷಕರಾದ ರತ್ನಾಕರ ತೇಲೋಲಿಕರ,ಅಂಗನವಾಡಿ ಕಾರ್ಯಕರ್ತೆ, ವಿದ್ಯಾರ್ಥಿಗಳು ಇದ್ದರು.