ಸುದ್ದಿ ಕನ್ನಡ ವಾರ್ತೆ
ಶಿರಸಿ:ನಗರದ ವಿಶ್ವಪ್ರಸಿದ್ಧ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಕೇಂದ್ರೀಯ ಬಸ್ ನಿಲ್ದಾಣವನ್ನು ಫೆ.22ರಿಂದ ಗಣೇಶ ನಗರದ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ.
ಸಿದ್ದಾಪುರ ಮತ್ತು ಕುಮಟಾ ರಸ್ತೆಯಿಂದ ಬರುವ ಬಸ್ಗಳು ಹನುಮಾನ ವ್ಯಾಯಾಮ ಶಾಲೆಯಲ್ಲಿ ನಿಂತು ಅಲ್ಲಿಂದ ಗಣೇಶ ನಗರದ ಬಸ್ ನಿಲ್ದಾಣಕ್ಕೆ, ಗಣೇಶ ನಗರದ ಬಸ್ ನಿಲ್ದಾಣದಿಂದ ಹೊರಟ ಬಸ್ ಹನುಮಾನ್ ವ್ಯಾಯಾಮ ಶಾಲೆ ಅಲ್ಲಿಂದ ಐದು ವೃತ್ತ ಮೂಲಕ ಕುಮಟಾ ಮತ್ತು ಸಿದ್ದಾಪುರ ರಸ್ತೆಗೆ ತೆರಳಲಿದೆ.ಇದೇ ರೀತಿಯಾಗಿ ಹುಬ್ಬಳ್ಳಿ ರಸ್ತೆಯಿಂದ ಬರುವ – ಹೋಗುವ ಬಸ್ಗಳು ಎಪಿಎಂಸಿ ಪ್ರವೇಶ ದ್ವಾರ (ಅಯ್ಯಪ್ಪ ನಗರ ಕ್ರಾಸ್)ದ ಮೂಲಕ ಸಾಗಲಿವೆ. ಬನವಾಸಿ ಮಾರ್ಗದ ಬಸ್ಗಳಿಗೆ ಬನವಾಸಿ ರಸ್ತೆಯ ಬನವಾಸಿ ನಾಖಾದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಯಲ್ಲಾಪುರ-ಬೆಂಗಳೂರು ಬನವಾಸಿ ಮಾರ್ಗವಾಗಿ ಸಾಗು ಬಸ್ಗಳಿಗೆ ಕೋಟೆಕೆರೆ ರಸ್ತೆ, ಖಾನ್ ಸ್ವಾಮಿಲ್ ಮೂಲಕ ಬನವಾಸಿ ನಾಖಾಗೆ ತೆರಳಿ ಅಲ್ಲಿಂದ ಮುಂದೆ ಸಾಗಲಿವೆ ಎಂದು ಉ.ಕ. ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮನವರ್ ತಿಳಿಸಿದ್ದಾರೆ.
