ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ಲಾರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮೂರು ಹೋರಿಗಳನ್ನು ತಾಲೂಕಿನ ಗುಳ್ಳಾಪುರದ ಬಳಿ ಪೋಲಿಸರು ರಕ್ಷಿಸಿ ಲಾರಿ ವಶಕ್ಕೆ ಪಡೆದು
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಧಾಣಾ ಜಿಲ್ಲೆಯ ಸಾದಿಕ ಸರ್ಪುದ್ದೀನ ಶೇಖ್, ಖಾಶೀಪ ಸುಹಾಬ್ ಮಾಂಡೇಕರ್ ಹಾಗೂ ಜ್ಞಾನೇಶ್ವರ ಆತ್ಮಾರಾಮ ಮುಂಡೆ ಮೂರು ಮಂದಿ ಬಂಧಿತರು. ಇವರು ಹೋರಿಗಳನ್ನು ಲಾರಿಯಲ್ಲಿ ಕಟ್ಟಿಕೊಂಡು ಮಹಾರಾಷ್ಟ್ರದಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದರು.
ಗುಳ್ಳಾಪುರದ ಹೆಗ್ಗಾರ ಕ್ರಾಸ್ ಬಳಿ ಲಾರಿಯನ್ನು ತಡೆದು, ವಾಹನವನ್ನು ಪರಿಶೀಲಿಸಿದಾಗ ಲಾರಿಯಲ್ಲಿ ಅಕ್ರಮವಾಗಿ
ಹೋರಿಗಳನ್ನು ಸಾಗಿಸುವದ್ದನ್ನು ತಡೆದು, ಪೊಲೀಸರು ಆರೋಪಿಗಳ ಜೊತೆ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಕೊಂಡಿದ್ದಾರೆ.
