Banner Ad

ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಶಿರಸಿ ತಾಲೂಕಿನ ಭೈರುಂಬೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಆಡಳಿತ)ರವರ ಕಛೇರಿ, ಶಿರಸಿ ಶೈಕ್ಷಣಿಕ ಜಿಲ್ಲೆ ,ಡಾ. ಎಚ್. ಎಫ್. ಕಟ್ಟಿಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ ಅಪರ ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ
ಶಿಕ್ಷಣ ಪರಿಶ್ರಮ ಹಿರಿಮೆಗೆ ಮನ್ನಡೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ
ದಿನಾಂಕ: 19-02-2026, ಗುರುವಾರ ಸ್ಥಳ : ಶ್ರೀ ಶಾರದಾಂಬಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಭೈರುಂಬೆಯಲ್ಲಿ ಯಶಸ್ವಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಡಾ.ಕಟ್ಟೀಮನಿ ಪ್ರತಿಷ್ಠಾನ ಧಾರವಾಡ ವತಿಯಿಂದ 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜೋಯಿಡಾ ತಾಲೂಕಿನಲ್ಲಿಯೇ ಉತ್ತಮ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ಗುಂದದ ಮುಖ್ಯೋಪಾಧ್ಯಾಯರಾದ ಜೋಸಫ್ ಗೊನ್ಸಾಲಿಸ್(ಇಂಗ್ಲಿಷ್ ಭಾಷೆ ),ಸಹ ಶಿಕ್ಷಕರಾದ ಪುರುಷೋತ್ತಮ ಸರ್(ಸಮಾಜ ವಿಜ್ಞಾನ),ನವೀನ ಶೇಟ್(ಕನ್ನಡ ಭಾಷೆ),ರಿಯಾ ಮೇಡಂ(ಹಿಂದಿ ಭಾಷೆ).ಇವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸನ್ಮಾನಿತ ಶಿಕ್ಷಕ ವೃಂದದವರಿಗೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು,ಪಾಲಕರು,ಪೋಷಕರು,ಹಳೆಯ ವಿದ್ಯಾರ್ಥಿಗಳು,ಶಾಲೆಯ ವಿದ್ಯಾರ್ಥಿಗಳು,ಗಣ್ಯರು,ಶಿಕ್ಷಣ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Banner Ad
Banner Ad