ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಶ್ರೀ ಸಿದ್ಧೇಶ್ವರ,ಶ್ರೀ ಸಾತೇರಿ ದೇವರ ಅಷ್ಟಬಂಧನ ಕಾರ್ಯಕ್ರಮ ದಿನಾಂಕ:21-02-2026 ರ ಶನಿವಾರ,ದಿನಾಂಕ:22-02-2026 ರ ರವಿವಾರ ರಾತ್ರಿ 11-30ಕ್ಕೆ ಶ್ರೀ ಸಿದ್ಧೇಶ್ವರ ದೇವರ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಸಿದ್ಧೇಶ್ವರ ನಾಟ್ಯ ಮಂಡಳಿ ಅಣಶಿ ಶ್ರೀ ರಾಮಚಂದ್ರ ಕಾಜುಗಾರ ಇವರ ನಿರ್ದೇಶನದಲ್ಲಿ ಶ್ರೀ ಮುತ್ತುರಾಜ್ ಎಮ್ ಸಿಂಗಾಡಿ ಇವರ ಪ್ರಥಮ ವಿರಚಿತ ಕನ್ನಡ ಸುಂದರ ಸಾಮಾಜಿಕ ನಾಟಕ “ಶ್ರೀಮಂತರ ದರ್ಪಕ್ಕೆ ಸಿಡಿದೆದ್ದ ಬಡವ” ಅರ್ಥಾತ್ “ಮನೆಯ ಜ್ಯೋತಿ ಮಸಣದ ಪಾಲಾಯ್ತು ” ಪ್ರದರ್ಶನ ನಡೆಯಲಿದೆ. ನಾಟಕದ ಪುರುಷ ಪಾತ್ರದಲ್ಲಿ ಆನಂದ ಮಾಸ್ಕರ,ರಾಜೇಂದ್ರ ಮಾಸ್ಕರ,ರಾಜೇಶ ಕಾಜುಗಾರ, ಮಂಜುನಾಥ ಮಾಸ್ಕರ,ವಿನೋದ ಮಾಸ್ಕರ,ಶ್ರೇಯಸ ಮಾಸ್ಕರ, ಪ್ರಸಾದ ಮಾಸ್ಕರ,ಸೀತಾರಾಮ ವೇಳಿಪ,ಪ್ರವೀಣ ಕಾಜುಗಾರ, ಸಂಜಯ ಮಾಸ್ಕರ,ಗಣೇಶ ವೇಳಿಪ,ಪ್ರೇಮಾನಂದ ಕಾಜುಗಾರ, ಅಕ್ಷಯ ಕಾಜುಗಾರ. ಸ್ತ್ರೀ ಪಾತ್ರದಲ್ಲಿ ಪಾರ್ವತಿ,ರಂಜನಿ,ಸಂಗಿ. ತೆರೆ-ಮರೆಯಲ್ಲಿ ಮಹಾದೇವ ವೇಳಿಪ ಬಾಕಿತ್,ಸಂಜಯ ಕಾಜುಗಾರ,ಸುಭಾಷ ಕಾಜುಗಾರ. ಸ್ಟೇಜ್ ಮ್ಯಾನೇಜರ್ : ಉದಯ ಕಾಜುಗಾರ,ದಯಾನಂದ ಕಾಜುಗಾರ.ನಾಟಕ ಮ್ಯಾನೇಜರ್:ಅರ್ಜುನ ಕಾಜುಗಾರ,ರತ್ನಾಕರ ಮಾಸ್ಕರ. ಮುಖ್ಯಸ್ಥರು:ದತ್ತಾರಾಮ ಮಾಸ್ಕರ,ಗುರುನಾಥ ಮಾಸ್ಕರ. ಮಿರಾಶಿ: ಶಿವರಾಮ ವೇಳಿಪ. ನಾಟಕ ಮಂಡಳಿ ಸಹಾಯಕರು:ರತ್ನಾಕರ ಕಾಜುಗಾರ. ಪುರೋಹಿತರು:ಬಾಳು ನಾಖರೆ ಮತ್ತು ದೀಪಕ ನಾಖರೆ ಕಡಗರ್ಣಿ. ರಂಗಸಜ್ಜಿಕೆ ಶ್ರೀ ದುರ್ಗಾದೇವಿ ರಂಗ ಸಜ್ಜಿಕೆ, ಉಳಗಾ ಕಾರವಾರ. ಹಾರ್ಮೋನಿಯಂ:ರವಿ ಪೆಡ್ನೇಕರ ಹಾಗೂ ಸಂಗಡಿಗರು ಯಲ್ಲಾಪುರ. ಊರಿನ ಪ್ರಮುಖರು: ವೇಳಿಪ, ಮಾಸ್ಕರ,ಕಾಜುಗಾರ ಬಂಧು-ಮಿತ್ರರು ಅಣಶಿ.