ಸುದ್ದಿ ಕನ್ನಡ ವಾರ್ತೆ
ಕೊಲಂಬೋ:ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ರವಿವಾರ ಕೊಲಂಬೋದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡವು, ಪಾಕಿಸ್ತಾನವನ್ನು ಸೋಲಿಸಿ ಸೂಪರ್ 8 ಸುತ್ತಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 175 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ
114 ರನ್ ಗಳಿಗೆ ಆಲೌಟ್ ಆಗಿ 61 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ಭಾರತ ಪರ ಇಶಾನ್ ಕಿಶನ್ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು40 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 77 ರನ್ ಬಾರಿಸಿದರು. ಬೌಲಿಂಗ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಮತ್ತು ಜಸ್ವೀತ್ ಬುಮ್ರಾ ತಲಾ ಎರಡುವಿಕೆಟ್ ಪಡೆದರೆ, ಕುಲ್ ದೀಪ್ ಯಾದವ್ ಮತ್ತು ತಿಲಕ್ ವರ್ಮಾ ಕೂಡ ತಲಾ ಒಂದು ವಿಕೆಟ ಪಡೆದರು. ಇದರಪರಿಣಾಮವಾಗಿ ಪಾಕಿಸ್ತಾನ 114 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 61 ರನ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಇದು ಪಾಕಿಸ್ತಾನದ ವಿರುದ್ಧ ಭಾರತದ ಎಂಟನೇ ಟಿ20 ವಿಶ್ವಕಪ್ ಗೆಲುವು. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪೈಪೋಟಿ ವಿಶ್ವದ ಅತ್ಯಂತ ದೊಡ್ಡ ಕ್ರೀಡಾ ಪೈಪೋಟಿಗಳಲ್ಲಿ ಒಂದಾಗಿದೆ.
ಶ್ರೀಲಂಕಾದ ಕೊಲೊಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 2026ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 61 ರನ್ಗಳಿಂದ ಸೋಲಿಸಿದೆ.
ಭಾರತದ ಸ್ಕೋರ್: 20 ಓವರ್ಗಳಲ್ಲಿ 175/7 (ಇಶಾನ್ ಕಿಶನ್ 77, ಸೂರ್ಯಕುಮಾರ್ ಯಾದವ್ 32).
ಪಾಕಿಸ್ತಾನದ ಸ್ಕೋರ್: 18 ಓವರ್ಗಳಲ್ಲಿ 114ಕ್ಕೆ ಆಲೌಟ್ (ಉಸ್ಮಾನ್ ಖಾನ್ 44; ಹಾರ್ದಿಕ್ ಪಾಂಡ್ಯ, ಜಸ್ವೀತ್ ಬುಮ್ರಾ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್).
ಈ ಜಯದೊಂದಿಗೆ ಭಾರತ ತಂಡವು ಟೂರ್ನಿಯ ಸೂಪರ್ 8 ಹಂತಕ್ಕೆ ಅಧಿಕೃತವಾಗಿ ಅರ್ಹತೆ ಪಡೆದಿದೆ.ಟಿ20 ವಿಶ್ವಕಪ್: ಉಭಯ ತಂಡಗಳು ಈವರೆಗೆ 9 ಬಾರಿ ಮುಖಾಮುಖಿಯಾಗಿದ್ದು, ಭಾರತ 8 ಬಾರಿ ಜಯಗಳಿಸಿದೆ.
ಒಟ್ಟು ಟಿ20 ಪಂದ್ಯಗಳು: ಇಲ್ಲಿಯವರೆಗೆ ನಡೆದ 17 ಪಂದ್ಯಗಳಲ್ಲಿ ಭಾರತ 14 ರಲ್ಲಿ ಗೆದ್ದರೆ, ಪಾಕಿಸ್ತಾನ ಕೇವಲ 3 ಪಂದ್ಯಗಳನ್ನು ಗೆದ್ದಿದೆ.
ಒಟ್ಟಾರೆ ಐಸಿಸಿ ವಿಶ್ವಕಪ್ಗಳು (ODI & T20): 17 ಪಂದ್ಯಗಳಲ್ಲಿ ಭಾರತ 16 ಬಾರಿ ಜಯಭೇರಿ ಬಾರಿಸಿದೆ.
