ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಫ್ರೆಂಡ್ಸ್ ಕ್ಲಬ್ ಅನಗೋಡ ಎಫ್ ಸಿ ಎ ತಂಡದ ಎರಡನೆಯ ವರ್ಷದ ರಾಜ್ಯಮಟ್ಟದ ಹವ್ಯಕ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಫೆಬ್ರವರಿ 7 ಮತ್ತು 8 ರಂದು ಯಲ್ಲಾಪುರದ ಬಿಸಗೋಡ ಆನೆ ಹೊಂಡ ಮೈದಾನದಲ್ಲಿ ಜರುಗಿತು.

ಈ ಪಂದ್ಯಾವಳಿಯಲ್ಲಿ ನಿಸರ್ಗ ಸಿದ್ದಾಪುರ ತಂಡ ಮೊದಲ ಬಹುಮಾನ (22222 ರೂ ಹಾಗೂ ಆಕರ್ಷಕ ಟ್ರೋಫಿ ) ಪಡೆದುಕೊಂಡಿದೆ. ದ್ವಿತೀಯ ಬಹುಮಾನ ( 11111 ರೂ ಹಾಗೂ ಆಕರ್ಷಕ ಟ್ರೋಫಿ) ವನ್ನು ಹವ್ಯಕ ಫ್ರೆಂಡ್ಸ್ ತಂಡವು ಪಡೆದುಕೊಂಡಿದೆ.
