ಸುದ್ದಿ ಕನ್ನಡ ವಾರ್ತೆ
ನಾವು ಜೀವನ ದಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ವಿಚಾರಿಸಿ ಇಡುವಂತಾಗಬೇಕು ದೇವರು ಎಲ್ಲವನ್ನೂ ನೋಡುತ್ತಾನೆ ಎಂದು ಶಾಸಕರು ಮತ್ತು ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರು ಆಗಿರುವ ಆರ್ ವಿ ದೇಶಪಾಂಡೆ ಅವರು ಹೇಳಿದರು

ಇಂದು ಮದ್ಯಾಹ್ನ ಅವರು ಉಳವಿ ದೇವಸ್ಥಾನ ಕ್ಕೆ ಭೇಟಿ ನೀಡಿದರು ಮದ್ಯಾಹ್ನ 1 ಘಂಟೆಗೆ ದೇಶಪಾಂಡೆ ಅವರು ಉಳವಿ ಶ್ರೀ ಚನ್ನಬಸವಣ್ಣ ನವರ ದೇವಸ್ಥಾನ ಕ್ಕೆ ಭೇಟಿನೀಡಿ ಸನ್ಮಾನ ಸಭೆ ಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು
ಜೀವನದಲ್ಲಿ ಗುರುಹಿರಿಯರ ಆಶೀರ್ವಾದ ಮುಖ್ಯ, ಜನ ಪ್ರತಿನಿಧಿ ಗಳು ಕೇವಲ ಗುತ್ತಿಗೆ ಕೆಲಸಕ್ಕೆ ಮಾತ್ರ ಸೀಮಿತ ವಾಗಿರದೇ ಜನರ ಕಷ್ಟ ಸುಖ ಗಳಿಗೆ ಸ್ಪಂದಿಸ ಬೇಕು ಅಂದರೆ ಮಾತ್ರ ಮಾನವ ನಾಗಿ ಹುಟ್ಟಿದ್ದಕ್ಕೆ ಸಾರ್ಥಕತೆ ಬರುತ್ತದೆ, ನಾನು ಉಳವಿ ಕ್ಷೆತ್ರದ ಹಲವಾರು ಅಭಿವೃದ್ಧಿ ಕೆಲಸ ಮಾಡಿದ ಧನ್ಯತೆ ನನಗಿದೆ 45 ವರ್ಷ ಗಳಿಂದ ಇಲ್ಲಿಗೆ ಬಂದು ದೇವರ ದರ್ಶನ ಪಡೆಯುತ್ತಿದ್ದೇನೆ ಎಂದರು ಬರುವ ದಿನಾಂಕ 3 ರಂದು ಉಳವಿ ಯಲ್ಲಿ ಮಹಾ ರಥೋತ್ಸವ ನಡೆಯಲಿದೆ ಆ ದಿನ ನಾನು ಇರಬೇಕಾಗಿತ್ತು ಆದರೆ ವಿಧಾನ ಸಭಾ ಅಧಿವೇಶನ ನಿಮಿತ್ತ ನಾನು ಬರುತ್ತಿಲ್ಲ ದೇವರ ದರುಶನ ಪಡೆಯಲು ಇಂದು ಬಂದಿದ್ದೇನೆ ಎಂದುಹೇಳಿದ ದೇಶಪಾಂಡೆ ಅವರು ಹಲವು ಗಣ್ಯರನ್ನು, ಮತ್ತು ಕೆಲಸ ಗಾರರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ನದ ಅಧ್ಯಕ್ಷ ಸಂಜಯ ಕಿತ್ತೂರ, ಸದಸ್ಯರು ವಿರೇಶ್ ಕಂಬಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್ ಮೊಕಾಶಿ, ತಹಸೀಲ್ದಾರ್ ಮಂಜುನಾಥ್ ಮುನ್ನೊಳ್ಳಿ, ಇತರ ಗಣ್ಯರು ಉಪಸ್ಥಿತರಿದ್ದರು.ನಂತರ ಶಾಸಕರು ರಥ ದ ಬೀದಿಗೆ ಬಂದು ರಥ ಪೂಜೆ ನಡೆಸಿದರು ಚಕ್ಕಡಿ ಹೊತ್ತು ಬಂದ ಬಸವಣ್ಣ ಗಳಿಗೆ ಬಾಳೆಹಣ್ಣು ನೀಡಿ ಬಸವಣ್ಣ ಗಳನ್ನು ಕೈಯಿಂದ ನೇವರಿಸಿ ಆಶೀರ್ವಾದ ಪಡೆದರು. ಸಿಪಿಐ ಚಂದ್ರಶೇಖರ್ ಹರಿಹರ ಮತ್ತು ಪಿಎಸ್ಐ ಮಹೇಶ ಮಾಳಿ ಅವರು ಸೂಕ್ತ ಭದ್ರತೆ ಮಾಡಿದ್ದರು
