ಸುದ್ದಿ ಕನ್ನಡ ವಾರ್ತೆ

ಜೋಯಿಡಾ ಬಸ್ ನಿಲ್ದಾಣಕ್ಕೆ ಬಂದ ಕಾರವಾರ ಬಸ್ ಡ್ರೈವರ ರಿಗೆ ಬಸ್ಸು ನಿಲ್ಲಿಸಿ ಕೆಳಗೆಇಳಿದಾಗ ಅಲ್ಲಿ ಎರಡು ಸಾವಿರ ರೂಪಾಯಿ ಗಳು ಬಿದ್ಫು ಕೊಂಡಿದ್ಫನ್ನು ಗಮನಿಸಿದರು, ಕೂಡಲೇ ಅದನ್ನು ಎತ್ತಿಕೊಂಡು ಹಣ ಕಳೆದು ಕೊಂಡವರು ಯಾರಿದ್ದಾರೆ ಎಂದು ಅಕ್ಕ ಪಕ್ಕ ಕೇಳಿದರು. ಕೊನೆಗೆ ಅವರಿಗೆ ಹಣ ಕಳೆದು ಕೊಂಡವರು ಸಿಕ್ಕೇಬಿಟ್ಟರು,

ಅವರಿಂದ ಸರಿಯಾದ ಮಾಹಿತಿಯನ್ನು ಪಡೆದು ಕೊಂಡವರೆ ಕಾರವಾರ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ನೀಲಕಂಠ ಗೌಡ ಅವರು, ಹಣ ಕಳೆದು ಕೊಂಡು ಹುಡುಕಾಡುತ್ತಿದ್ದವರು ಜೋಯಿಡಾ ದಲ್ಲಿ ರತ್ನಾಕರ್ ಗಾವುಡಾ ಅವರು, ರತ್ನಾಕರ್ ಅವರಿಗೆ ನೀಲಕಂಠ ಗೌಡ ಅವರು ಜೋಯಿಡಾ ಗ್ರಾಮ ಪಂಚಾಯತ್ ದ ಮಾಜಿ ಅಧ್ಯಕ್ಷ ರಾದ ಅರುಣ್ ಕಾಂಬ್ರೆಕರ್ ಅವರ ಸಮ್ಮುಖದಲ್ಲಿಹಣ ರೂಪಾಯಿ ಎರಡು ಸಾವಿರ ಗಳನ್ನು ಹಸ್ತಾಂತರಿಸಿದರು, ಅದು ಅವರಿಗೆ ದೊಡ್ಡ ಸಮಾಧಾನ ತಂದಂತೆ ಕಾಣುತ್ತಿತ್ತು ಯಾವುದೊ ಕಾರ್ಯಕ್ಕೆ ಹೊರಟವರಿಗೆ ಹಣ ಕಳೆದು ಹೋದರೆ ಆಗುವ ಸಂಕಷ್ಟ ಅಷ್ಟಿಷ್ಟಲ್ಲ ಆ ಕೊರತೆಯು ನೀಗಿದರೆ ಆಗುವ ಸಮಾಧಾನವೇ ಜೋಯಿಡಾ ದಲ್ಲಿ ಕಂಡು ಬಂದಿತು. ಹಣ ಹಣ ಎಂದು ಬಾಯಿ ಬಿಡುವವರ ಮದ್ಯೆ ಇಂತಹ ವಿಶಾಲ ಮನಸ್ಸಿನ ಡ್ರೈವರ ನೀಲಕಂಠ ಅವರಿಗೆ ರತ್ನಾಕರ್ ಅವರು ಅಭಿನಂದಿಸಿದರು,. ತಾಲೂಕಿನಲ್ಲಿ ಕೆ ಎಸ್ ಆರ್ ಟಿ ಸಿ ಡ್ರೈವರ್ ನೀಲಕಂಠ ಅವರ ಬಗ್ಗೆ ಅಪಾರ ಮೆಚ್ಚುಗೆ ಕೇಳಿ ಬಂದಿದೆ