ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ತಾಲೂಕಿನ ಪೋಟೋಲಿ ಸಮೀಪ ಉಣಕಲ್ಲ ಶ್ರೀ ಸಿದ್ದಪ್ಪಜ್ಜನ ಸೇವಾ ಸಮಿತಿ ವತಿಯಿಂದ ಉಳವಿ ಜಾತ್ರೆ ನಿಮಿತ್ತ ದಿನಾಂಕ 24/01/26 ರಿಂದ ದಿನದ 24 ಗಂಟೆಗಳ ದಾಸೋಹ ಸೇವೆ ನಡೆಯುತ್ತಿದ್ದು, ಫೆಬ್ರವರಿ 1ರವರೆಗೆ ನಿರಂತರವಾಗಿ ನಡೆಯಲಿದೆ.

ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಪ್ರಸಾದ ಸ್ವೀಕರಿಸುತ್ತಿದ್ದಾರೆ.
ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಈ ಸ್ತುತ್ಯರ್ಹ ಸೇವಾ ಕಾರ್ಯಕ್ಕೆ ಉಣಕಲ್ಲ ಗ್ರಾಮದ ಸದ್ಭಕ್ತರು, ಶಾಸಕರಾದ ಮಹೇಶ ತೆಂಗಿನಕಾಯಿ ಹಾಗೂ ಪಕ್ಷದ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅವರು ಕೈಜೋಡಿಸಿದ್ದಾರೆ.
ದಾಸೋಹ ಸೇವೆಯಲ್ಲಿ ಮಂಜುನಾಥ ಪವಾ‌ರ, ಬಸಣ್ಣ ಸರಗನ್ನವರ,ನೀಲಪ್ಪ ತಿರ್ಲಾಪುರ, ಮುತ್ತಣ್ಣ ಮಡಿವಾಳರ, ವೀರೇಶ ವಾಲಿ,ದ್ಯಾಮನಗೌಡರ ಮೀಸಿನಗೌಡರ, ಮಹಾಂತೇಶ ಲಕ್ಕಣ್ಣವರ,ಶಿವಪುತ್ರಪ್ಪ ಹೊಂಗಳ, ಗುರು ಹುರಕಡ್ಲಿ ಸೇರಿದಂತೆ ಅನೇಕರು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.