ಸುದ್ದಿ ಕನ್ನಡ ವಾರ್ತೆ
ಬೇಡ್ತಿ ವರದಾ ನದಿ ತಿರುವು ಯೋಜನೆಯನ್ನು ವಿರೋಧಿಸಿದ ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ, ಸ್ವರ್ಣವಲ್ಲೀ ಶ್ರೀಗಳ ನೇತೃತ್ವದ ಜನಾಂದೋಲನ ಜ.೧೧ರಂದು ಸಮಾವೇಶವಾಗಿ ನಡೆಯಲಿದೆ. ಈ ನಡೆಯನ್ನು ಸ್ವಾಗತಿಸುತ್ತೇವೆ ಶ್ರೀಗಳ ತೀರ್ಮಾನಕ್ಕೆ ಎಂದೂ ಬದ್ಧ ಹಾಗೂ ಶ್ರೀಗಳ ಹಿಂದೆ ಯಾವತ್ತೂ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ಶಿರಸಿ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ,ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಅವರು ಅವರ ಕ್ಷೇತ್ರದಲ್ಲಿ ಈ ಯೋಜನೆ ಆಗುತ್ತದೆ ಎಂದು ಚಪ್ಪಾಳೆ ಹೊಡೆಸಿಕೊಳ್ಳುತ್ತಿದ್ದಾರೆ. ಇಲ್ಲಿದ್ದ ರೈತರನ್ನು ಬಾಣಲೆಗೆ ನೂಕಿ ಅಲ್ಲಿ ಏನನ್ನು ಕೊಡುತ್ತಾರೆ? ನದಿ ತಿರುವು ಯೋಜನೆ ಕೈಗೆತ್ತಿಕೊಂಡು ಜಿಲ್ಲೆಗೆ ಕಾಲಿಟ್ಟರೆ ಹುಷಾರ್ ಎನ್ನ ಬೇಕಾಗುತ್ತದೆ ಎಂದೂ ಭೀಮಣ್ಣ ಎಚ್ಚರಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆ ಕೈ ಬಿಡಬೇಕು. ಇಲ್ಲಿ ಯಾವುದೇ ಕಾರಣಕ್ಲೂ ಅವಕಾಶ ಕೊಡುವದಿಲ್ಲ. ಜಿಲ್ಲೆಯ ಜನತ ತಾಳ್ಮೆಯನ್ನು ಪರೀಕ್ಷಿಸಬಾರದು ಎಂದೂ ಹೇಳಿದ ಅವರು,
ಅನೇಕ ಯೋಜನೆಗಳ ಜಿಲ್ಲೆ ಇದು. ಇಲ್ಲಿ ಅಭಿವೃದ್ದಿ ಆಗಬೇಕಾದರೆ ಪರಿಸರ ಎನ್ನುತ್ತಾರೆ. ಮುಳಗಿಸುವ ಯೋಜನೆಗೆ ಇದ್ಯಾವುದರ ಲಕ್ಷ್ಯವೇ ಇಲ್ಲ. ಜಿಲ್ಲೆಯ ಜನ ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದರು.
ಯಾವತ್ತೂ ಜಿಲ್ಲೆಯ ಜನರ ನೋವಿನ ಜೊತೆಗೆ ಇರುತ್ತೇನೆ. ಜಿಲ್ಲೆಯ ಜನರ ಸಹನೆಯನ್ನು ಉದ್ದಟತನದಿಂದ ಪ್ರಶ್ನಿಸಿದರೆ ಹುಷಾರ್ ಎನ್ನಬೇಕಾಗುತ್ತದೆ ಎಂದು ಗುಡುಗಿದರು.
ಈ ವೇಳೆ ಎಸ್.ಕೆ.ಭಾಗವತ್, ದೀಪಕ ದೊಡ್ಡೂರು, ಅಬ್ಬಾಸ ತೋನ್ಸೆ, ಜಗದೀಶ ಗೌಡ, ಮೋಹಿನಿ ಬೈಲೂರು, ಸುಮಾ ಉಗ್ರಾಣಕರ್, ಜ್ಯೋತಿ ಗೌಡ ಇತರರು ಇದ್ದರು
