- ದಾಂಡೇಲಿ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಸ್ಥಾಪನೆಯ 550 ವರ್ಷಗಳ ಸುಸಂದರ್ಭದಲ್ಲಿ ಪರ್ತಗಾಳಿ ಮಠದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಸ್ವಾಮೀಜಿಯವರ ದಿವ್ಯ ಸಂಕಲ್ಪದಂತೆ ಶ್ರೀ ರಾಮ ನಾಮ ಜಪ ಅಭಿಯಾನವು ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯುತ್ತಿದ್ದು, ಶ್ರೀ ರಾಮನಾಮ ಜಪವು ಮೂರು ಕೋಟಿ ತಲುಪಿದೆ.
ನಗರದಲ್ಲಿ ನಡೆಯುತ್ತಿರುವ ಶ್ರೀ ರಾಮ ನಾಮ ಜಪ ಕಾರ್ಯಕ್ರಮದಲ್ಲಿ ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾದ ತಾಲೂಕಿನ ಕುಂಬಾರವಾಡ ಮತ್ತು ರಾಮನಗರದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು ಕೈಜೋಡಿಸಿದ್ದಾರೆ. 2024ರ ಏಪ್ರಿಲ್ 17 ಆರಂಭಗೊಂಡಿರುವ ಈ ಅಭಿಯಾನವು 2025 ಅಕ್ಟೋಬರ್ 18ರವರೆಗೆ ನಡೆಯಲಿದೆ. ಪೂಜ್ಯ ಪರ್ತಗಾಳಿ ಶ್ರೀಗಳು ದಾಂಡೇಲಿಯ ಈ ಅಭಿಯಾನಕ್ಕೆ 18 ಕೋಟಿ ಶ್ರೀ ರಾಮ ನಾಮ ಜಪ ಗುರಿಯನ್ನು ನೀಡಿದ್ದು, ಮಂಗಳವಾರ ಈ ಗುರಿಯ ಪೈಕಿ ಮೂರು ಕೋಟಿ ಶ್ರೀ ರಾಮ ನಾಮ ಜಪ ತಲುಪಿದೆ.
ಈ ಅಭಿಯಾನದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು ಅತ್ಯಂತ ಶ್ರದ್ಧಾಭಕ್ತಿಯಿಂದ ಪಾಳಿಯ ಪ್ರಕಾರ ಭಾಗವಹಿಸುತ್ತಿದ್ದಾರೆ.
ಈ ಕಾರ್ಯಕ್ರಮದ ರೂಪುರೇಷೆ ಹಾಗೂ ಉದ್ದೇಶದ ಬಗ್ಗೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಾಮತ್ ಅವರು ಬುಧವಾರ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ವೈದಿಕರಾದ ಹೃಷಿಕೇಶ ಭಟ್, ಜಿ.ಎಸ್.ಬಿ ಸಮಾಜದ ಅಧ್ಯಕ್ಷರಾದ ರಾಧಾಕೃಷ್ಣ ಹೆಗಡೆ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಪ್ರಭು, ಜಿ.ಎಸ್.ಬಿ ಯುವ ವಾಹಿನಿಯ ಅಧ್ಯಕ್ಷರಾದ ಪುರುಷೋತ್ತಮ ಮಲ್ಯ, ಸಮಾಜದ ಪ್ರಮುಖರಾದ ರೋಷನ್ ನೇತ್ರಾವಳಿ, ನವೀನ ಕಾಮತ್, ಬಾಬಾಣ್ಣ ಶ್ರೀವತ್ಸ, ಪ್ರತಿಮಾ ಸುರೇಶ ಕಾಮತ್, ವೀಣಾ ಪೈ, ನಿವೇದಿತಾ ಕಾಮತ್, ವೀಣಾ ಪ್ರಭು, ಮಾಲಿನಿ ಕಾಮತ್, , ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು.